ಬೆಂಗಳೂರು: ಕನ್ನಡದ ಹಿರಿಯ ಸಾಹಿತಿ ವಿಜಯಾ ದಬ್ಬೆ ಶುಕ್ರವಾರ ಸಂಜೆ ನಿಧನರಾಗಿದ್ದಾರೆ.

ಅತಿಮಬ್ಬೆ ಪ್ರಶಸ್ತಿ ಪುರಸ್ಕೃತರಾದ ವಿಜಯಾ ದಬ್ಬೆ ಅವರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಅಮೂಲ್ಯ ಕೊಡುಗೆಗಳನ್ನು ನೀಡಿದ್ದು ರಾಜ್ಯದ ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿದ್ದರು.

ವಿಜಯಾ ದಬ್ಬೆ ಅವರ ನಿಧನಕ್ಕೆ ನಾಡಿನ ಸಾಹಿತಿಗಳು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಕನ್ನಡದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಕಿ ಎಂಬ ಹೆಗ್ಗಳಿಕೆ ಇವರದು.

ವಿಜಯಾ ದಬ್ಬೆಯವರು ಹಾಸನ ಜಿಲ್ಲೆಯ ಬೇಲೂರಿನ ದಬ್ಬೆಯಲ್ಲಿ ೧೯೫೧ ಜೂನ್ ೧ ರಂದು ಜನಿಸಿದರು. ದಿನಾಂಕ 23.02.2018 ಸಂಜೆ ನಿಧನರಾದರು.

ಇವರು ೧೨ಕ್ಕೂ ಹೆಚ್ಚು ಕೃತಿಗಳನ್ನು ಹಾಗು ೬೦ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಇರುತ್ತವೆ ಕವನ ಸಂಕಲನಕ್ಕೆ ಉದಯೋನ್ಮುಖ ವರ್ಧಮಾನ ಪ್ರಶಸ್ತಿ ಲಭಿಸಿದೆ. ಇವರ ಇತಿಗೀತಿಕೆಕವನಸಂಕಲನಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ೧೯೯೬ರ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಯ ತೃತೀಯ ಬಹುಮಾನ ಲಭಿಸಿದೆ.

ಪ್ರಶಸ್ತಿಗಳು

ಕರ್ನಾಟಕ ಸರ್ಕಾರದ “ಅತ್ತಿಮಬ್ಬೆ ಪ್ರಶಸ್ತಿ”

ಕರ್ನಾಟಕ ಲೇಖಕಿಯರ ಸಂಘದ “ಅನುಪಮಾ ಪ್ರಶಸ್ತಿ”

ಕರ್ನಾಟಕ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ

ವರ್ಧಮಾನ ಪ್ರಶಸ್ತಿ

ರತ್ನಮ್ಮ ಹೆಗಡೆ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತಿನ ಹಲವಾರು ದತ್ತಿ ಪ್ರಶಸ್ತಿಗಳು

Leave a Reply