ವಾಟ್ಸಾಪ್ ಗ್ರೂಪ್ ನಲ್ಲಿ ಸಹಪಾಠಿಗಳು ಹಂಚಿಕೊಂಡ ವಾಯ್ಸ್ ಕ್ಲಿಪ್ ನ ಸಹಾಯದಿಂದ ತಮಿಳುನಾಡಿನ ಡಾ. ಅಂಬೇಡ್ಕರ್ ಲಾ ಯುನಿವರ್ಸಿಟಿಯ
ಅಂತಿಮ ವರ್ಷದ ವಿದ್ಯಾರ್ಥಿ ಅಕ್ಷಯ್ ಕುಮಾರ್ (22) ಐದು ವರ್ಷಗಳ ಡಿಗ್ರಿಯನ್ನು ಪೂರ್ಣಗೊಳಿಸಿದ್ದಾರೆ.

ಕಲಿಕೆಯ ಸಮಯದಲ್ಲಿ ತನ್ನ ಪ್ರಾಯೋಗಿಕ ತೊಂದರೆಗಳನ್ನು ಎದುರಿಸಲು ನೆರವಾದ ಸ್ನೇಹಿತರಿಗೆ ಅಕ್ಷಯ್ ಆಭಾರಿ ಆಗಿದ್ದಾರೆ.

“ಶಾಲೆಯಲ್ಲಿರುವಾಗ ಪಾಠ ಪುಸ್ತಕಗಳು ಕಡಿಮೆ ಪುಟಗಳನ್ನು ಹೊಂದಿದ್ದವು. ಆಗ ಪಠ್ಯಗಳನ್ನು ಸಾಫ್ಟ್‌ವೇರ್ ಮೂಲಕ ಧ್ವನಿಯಾಗಿ ಪರಿವರ್ತಿಸಲು ಸುಲಭವಾಗಿತ್ತು. ಲಾ ಕಾಲೇಜಿನಲ್ಲಿ ಪುಟಗಳು ಸಂಖ್ಯೆಯ ಹೆಚ್ಚಿತ್ತು, ಮಾತ್ರವಲ್ಲ ಪುಟಗಳನ್ನು ಸ್ಕ್ಯಾನಿಂಗ್ ಮಾಡಲು ತುಂಬಾ ಸಮಯ ಹಿಡಿದುಕೊಳ್ಳುತ್ತಿತ್ತು. ಮಾತ್ರವಲ್ಲ ತುಂಬಾ ತರುತ್ತಿತ್ತು ಎನ್ನುತ್ತಾರೆ ಅಕ್ಷಯ್.

“9ನೇ ತರಗತಿಯಲ್ಲಿದ್ದಾಗ ಅಕ್ಷಯ್ ಸಂಪೂರ್ಣವಾಗಿ ತನ್ನ ದೃಷ್ಟಿಯನ್ನು ಕಳೆದುಕೊಂಡರು. ಜನಿಸಿದಾಗಲೇ ರೋಗಲಕ್ಷಣಗಳು ಕಂಡು ಬಂದಿದ್ದವು. ಆದರೆ ಆ ಸಮಯದಲ್ಲಿ ಚಿಕಿತ್ಸೆ ಮಾಡಬಹುದಿತ್ತು, ಆದರೆ ಈಗ ತುಂಬಾ ತಡವಾಗಿದೆ.

12 ನೇ ಸಿಬಿಎಸ್ಇ ಪರೀಕ್ಷೆಯಲ್ಲಿ ಅಕ್ಷಯ್ 92% ಅಂಕಗಳನ್ನು ಪಡೆದರು. ಮಗನ ಕಲಿಕೆಗೆ ಪೂರಕವಾದ ಎಲ್ಲಾ ತಾಂತ್ರಿಕ ಸವಲತ್ತುಗಳನ್ನು ತನ್ನ ಮಗನಿಗೆ ಸೆಲ್ವಕುಮಾರಿಯು ಒದಗಿಸಿ ಕೊಡುತ್ತಿದ್ದರು

ಅಕ್ಷಯ್ ಕಾನೂನು ವಿಶ್ವವಿದ್ಯಾನಿಲಯಕ್ಕೆ ಹೋದಾಗ, ಅವರ ಕಲಿಕೆಗೆ ಪೂರಕವಾದ ವಿಷಯಗಳನ್ನು ವಾಯ್ಸ್ ಮೆಸೇಜ್ ಮೂಲಕ ಕಳುಹಿಸುವ ಜವಾಬ್ದಾರಿಯನ್ನು ಅವರ ಐದು ಸಹಪಾಠಿಗಳು ವಹಿಸಿಕೊಂಡರು. ಮಾತ್ರವಲ್ಲ, ವರ್ಷಪೂರ್ತಿ ಅವರು ಪಟ್ಟು ಬಿಡದೆ ಈ ಕೆಲಸವನ್ನು ಮಾಡಿದ್ದಾರೆ. ಇದರ ಸಹಾಯದಿಂದ ಟಿಪ್ಪಣಿಗಳನ್ನು ಮಾಡಿ ಪರೀಕ್ಷೆಗೆ ಅಕ್ಷಯ್ ತಯಾರಿ ನಡೆಸುತ್ತಿದ್ದನು.

ಅವರು ಕಾನೂನಿನಲ್ಲಿ ಪದವಿ ಮುಗಿಸಿದ ನಂತರ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕಾನೂನು ಕ್ಷೇತ್ರದಲ್ಲಿ ಮುಂದುವರಿಯಲು ಅವರು ಬಯಸುತ್ತಾರೆ.

ಸಂಗೀತ ಮಾಂತ್ರಿಕ ಏ.ಆರ್. ರಹ್ಮಾನ್ ರವರ ಅಭಿಮಾನಿಯಾಗಿರುವ ಅಕ್ಷಯ್ ರಿಗೆ ಸಂಗೀತದಲ್ಲಿ ಅಪಾರ ಆಸಕ್ತಿ.
“ನಾನು ಸಂಗೀತ ಶಾಲೆ ಪ್ರಾರಂಭಿಸಲು ಬಯಸುತ್ತೇನೆ. ನಾನು ಇನ್ನೂ ಅದನ್ನು ಮಾಡಲು ಬಯಸುತ್ತೇನೆ. ಒಂದಲ್ಲ ಒಂದಿನ ನಾನು ಮಾಡುವೆ ಎಂಬ ಭರವಸೆಯಿದೆ”ಎಂದು ಲಂಡನ್‌ ಟ್ರಿನಿಟಿ ಕಾಲೇಜ್ ನಿಂದ ಕೀಬೋರ್ಡ್ ಗಾಗಿ ಗ್ರೇಡ್ -4 ಪರೀಕ್ಷೆಗಳನ್ನು ಪಾಸಾದ ಅಕ್ಷಯ್ ಹೇಳುತ್ತಾರೆ.

Leave a Reply