ಅದ್ದೂರಿ ಕಾರುಗಳ ನಿರ್ಮಾಪಕರಾದ ಫೋಕ್ಸ್ ವಾಗನ್ ಅಧೀನದಲ್ಲಿರುವ ಔಡಿ ಕಾರುಗಳ ಡೀಸೆಲ್ ಎಂಜಿನ್‍ಗಳ ಇಂಧನದ ಲೋಪದೋಷಗಳ ದೂರುಗಳಿಗೆ ಸಂಬಂಧಿಸಿ ಈ ಬಂಧನ ನಡೆದಿದೆ.

ಕಾರು ಮಾರುಕಟ್ಟೆಯಲ್ಲಿ ಬೃಹತ್ ಉದ್ದಿಮೆದಾರರಾದ ಔಡಿ ಚೀಫ್ ಎಕ್ಸಿಕ್ಯೂಟಿವ್ ರುಪರ್ಟ್ ಸ್ಟಾಡ್ಲರ್ ರನ್ನು ಬಂಧಿಸಲಾಗಿದೆ. ನಿರಂತರ ನಡೆದ ತನಿಖೆಯ ಬಳಿಕ ಅವರ ಮೇಲಿನ ಆರೋಪಕ್ಕೆ ಪುರಾವೆಗಳು ದೊರೆತಿದೆ.

ಡೀಸೆಲ್ ಎಂಜಿನ್ ಗಳ ಎಮಿಶನ್ ಟೆಸ್ಟ್ ನಡೆಸುವುದರಲ್ಲಿ ಕೆಲವು ಸಾಫ್ಟ್ ವೇರ್ ತಂತ್ರಜ್ಞಾನಗಳ ಮೂಲಕ ಕೆಲವು ಬದಲಾವಣೆ ತಂದಿದ್ದ ಅವರು ವಿಚಾರಣೆಯ ವೇಳೆ ಮಂಡಿಯೂರಬೇಕಾಯಿತು.

ಕಳೆದ ಮೂರು ವರ್ಷಗಳಿಂದ ವಿಚಾರಣೆ ನಡೆದ ಬಳಿ ತನಿಖಾ ತಂಡ ಅವರನ್ನು ಬಂಧಿಸಿತು. 2015ರಲ್ಲಿ ಬಂದ ದೂರಿನನ್ವಯ ಈಗಾಗಲೇ ಎಮಬತ್ತೈದು ಲಕ್ಷಕ್ಕಿಂತಲೂ ಹೆಚ್ಚು ಕಾರುಗಳನ್ನು ಕಂಪೆನಿ ಹಿಂಪಡೆದಿತ್ತು. ಬಳಿಕ ದುರಸ್ತಿಗೊಳಿಸಿ ಅದರ ಮಾಲೀಕರಿಗೆ ಒಪ್ಪಿಸಲಾಗಿತ್ತು

Leave a Reply