ಮತಯಂತ್ರ ಬೇಡ ಮತ ಪತ್ರಕ್ಕೆ ಮರಳೋಣವೆಂಬ ನಿಲುವಿನಿಂದ ಸಿಪಿಎಂ ತಿಪ್ಪರಲಾಗ ಹಾಕಿದೆ. ನಿನ್ನೆ ನಡೆ ಪಾಲಿಟ್ ಬ್ಯೂರೋ ಸಭೆಯಲ್ಲಿ ಈ ನಿರ್ಧಾರ ತಳೆದ ಸೂಚನೆಯಿದೆ.

ವಿದ್ಯುತ್ ಮತಯಂತ್ರದ ಬಗ್ಗೆ ಆತಂಕವಿರುವುದಾಗಿಯೂ ವಿ.ವಿ ಪ್ಯಾಟ್ ಸುರಕ್ಷಿತವೆಂಬುದು ಪಕ್ಷದ ನಿಲುವು ಆಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತಯಂತ್ರ ರದ್ದು ಪಡಿಸಿ ಬ್ಯಾಲೇಟ್ ಪೇಪರ್ ಉಪಯೋಗಿಸಬೇಕೆಂದು ಒತ್ತಾಯಿಸಿ ಕಮ್ಯೂನಿಸ್ಟ್ ಸಹಿತ 18 ಪ್ರತಿಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಲು ನಿರ್ಧರಿಸಿತ್ತು.

ಆದರೆ ನಿನ್ನೆ ನಡೆದ ಪಾಲಿಟ್ ಬ್ಯೂರೋ ಸಭೆಯಲ್ಲಿ ಇದರಿಂದ ದೂರ ನಿಲ್ಲುವ ನಿರ್ಧಾರ ತಾಳಿದೆ ಎನ್ನಲಾಗಿದೆ. ಆದ್ದರಿಂದ ಎಲ್ಲಾ ಮತ ಕೇಂದ್ರಗಳಿಗೂ ವಿ.ವಿ ಪ್ಯಾಟ್ ತಲುಪಿಸಲು ಕೇಂದ್ರ ಸಿದ್ಧವಾಗಬೇಕೆಂದು ಪಕ್ಷವು ಕೇಂದ್ರವನ್ನು ಒತ್ತಾಯಿಸಲಿದೆ.

ವರದಿ: ಮೀಡಿಯಾ ವನ್

Leave a Reply