ಶಹಡೋಲ್(ಮಧ್ಯಪ್ರದೇಶ): ವಿಜ್ಞಾನ ತಂತ್ರಜ್ಞಾನ ಯುಗದಲ್ಲಿ ಅಂಧ ವಿಶ್ವಾಸಕ್ಕೂಅದರದ್ದೇ ಸ್ಥಾನವಿದೆ.ಇದಕ್ಕೊಂದು ಉದಾಹರಣೆ ಬುಡಾರ್ ಎಂಬಲ್ಲಿನ ಸಾಮುದಾಯಿಕ ಆರೋಗ್ಯ ಕೇಂದ್ರದಲ್ಲಿ ಕಂಡು ಬಂದಿದೆ. ಬಾವಿಗೆ ಬಿದ್ದು ಮೃತಪಟ್ಟ ಬಾಲಕನ ಮೃತದೇಹವವನ್ನು ಉಪ್ಪಿನ ರಾಶಿಯಲ್ಲಿ ಇಟ್ಟು ಜೀವಂತ ಗೊಳಿಸಲು ಕುಟುಂಬದವರು ಯತ್ನಿಸಿದ್ದಾರೆ. ಇದಕ್ಕಾಗಿ ಆಸ್ಪತ್ರೆಯ ಅಧಿಕಾರಿಗಳಿಂದ ಅನುಮತಿಯನ್ನು ಕೂಡಾ ಪಡೆದಿದ್ದರು.

ವರದಿಯಾಗಿರುವ ಪ್ರಕಾರ ಧನಪುರಿಯ ಹಿಮಾಂಶ ಗುಪ್ತಾ ಎಂಬ ಬಾಲಕ ಬಾವಿಗೆ ಬಿದ್ದಿದ್ದನು. ಕೂಡಲೆ ಸ್ಥಳದಲ್ಲಿದ್ದವರು ಬಾಲಕನನು ರಕ್ಷಿಸಲು ಯತ್ನಿಸಿದರೂ ಆತ ಮೃತಪಟ್ಟಿದ್ದನು. ಪೊಲೀಸರು ಮೃತದೇಹವನ್ನು ಪೋಸ್ಟ್‍ಮಾರ್ಟಂಗಾಗಿ ಆಸ್ಪತ್ರೆಗೆ ಕಳುಹಿಸಿದ್ದರು.

ಮೃತ ಬಾಲಕನ ತಂದೆಗೆ ವಾಟ್ಸಪ್‍ನಲ್ಲಿ ಶವವನ್ನು ನಾಲ್ಕು ಗಂಟೆ ಉಪ್ಪಿನ ರಾಶಿಯಲ್ಲಿರಿಸಿದರೆ ಜೀವಂತವಾಗುತ್ತಾನೆ ಎಂದು ತಿಳಿಸಿದ್ದಾರೆ. ನಂತರ ಕುಟುಂಬದವರು ಆಸ್ಪತ್ರೆಯ ಅಧಿಕಾರಿಯ ಅನುಮತಿ ಪಡೆದು ಬಾಲಕನ ಶವದ ಮೇಲೆ ಉಪ್ಪಿನರಾಶಿಯಲ್ಲಿ ಇರಿಸುರಿದಿದ್ದಾರೆ .ಆದರೆ ಬಾಲಕ ಎಷ್ಟೇ ಹೊತ್ತಾದರೂ ಜೀವಂತನಾಗಿ ಎದ್ದು ಬಂದಿಲ್ಲ. ಅಂಧವಿಶ್ವಾಶದ ಈ ಎಲ್ಲ ನಾಟಕೀಯ ಘಟನೆಗಳು ಪೊಲೀಸರು ಮತ್ತು ವೈದ್ಯರ ಮುಂದೆಯೇ ನಡೆದಿದೆ.

 

 

Leave a Reply