ತನ್ನ ಗೆಳತಿಯೊಂದಿಗೆ ವಿಡಿಯೋ ಕಾಲಿಂಗ್ ನಲ್ಲಿ ಮಾತನಾಡುತ್ತಿದ್ದ ಯುವಕನೊರ್ವ (19) ತನ್ನನ್ನು ತಾನೇ ಗುಂಡಿಕ್ಕಿ ಕೊಂಡ ಘಟನೆ ಪಾಟ್ನಾ ದಲ್ಲಿ ನಡೆದಿದೆ‌.
ಬಂಟಿ ಎ.ಕೆ‌.ಎ ಆಕಾಶ್ ಕುಮಾರ್ ಮೃತ ದುರ್ದೈವಿಯಾಗಿದ್ದಾನೆ.

ಸೈಚಕ್ ಬ್ಯೂರೋ ಪೋಲಿಸರು ಹಾಸಿಗೆಯ ಮೇಲೆ ರಕ್ತದ ಮಡುವಿನಲ್ಲಿದ್ದ ಬಂಟಿಯ ಬಳಿ ಇದ್ದ ಮ್ಯಾಗಜೀನ್ ಹಾಗೂ ಪಿಸ್ತೂಲನ್ನು ಆತನ ನಿವಾಸದಿಂದ ವಶಪಡಿಸಿಕೊಂಡಿದ್ದಾರೆ.

ತನ್ನ ಗೆಳತಿಗೆ ಕರೆ ಮಾಡಿ ತಾನು ಶೂಟ್ ಮಾಡಿಕೊಂಡು ಸಾಯುವುದಾಗಿ ಹೇಳಿ ಹೆದರಿಸಲು ಯುವಕ ನಾಟಕ ಮಾಡಲೆತ್ನಿಸಿದ್ದನಾದರೇ ತನಗರಿವಿಲ್ಲದೇ ಪಿಸ್ತೂಲಿನಲ್ಲಿ ಬಾಕಿ ಆಗಿದ್ದ ಗುಂಡು ಆತನ ಸಾವಿಗೆ ಕಾರಣವಾಗಿದೆ.

ಹೆತ್ತವರು ಮರಣೋತ್ತರ ಪರೀಕ್ಷೆಗೆ ನಿರಾಕರಿಸಿದ್ದಾರಾದರೆ ಆತನ ಸಾವಿಗೆ ಗೆಳತಿಯೇ ಕಾರಣ ಎಂದು ದೂರು ದಾಖಲಿಸಿದ್ದಾರೆ.
ಈ ಸಾವು ಆಕಸ್ಮಿಕವೋ ಅಥವಾ ಆತ್ಮಹತ್ಯೆಯೋ ಎಂಬುದರ ಕುರಿತು ಪೋಲಿಸರು ಈಗಾಗಲೇ ತನಿಖೆಯನ್ನು ಆರಂಭಿಸಿದ್ದಾರೆ

Leave a Reply