ಕೋಟಾ: ವೆಲ್ಡರ್ ನ ಮಗಳಾದ 18 ವರ್ಷ ವಯಸ್ಸಿನ ವಿಶಾಖಾ ಜಡಾನ್ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ. ಅವರು ನೀಟ್ ಪರೀಕ್ಷೆಯನ್ನು 3,974 ರ‌್ಯಾಂಕ್ ನೊಂದಿಗೆ ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ವಿಶಾಖಾ ಜಡಾನ್ ಕೋಟಾ ನಗರದ
ಮಹಾವೀರ್ ನಗರ ವಿಸ್ತರಣೆ ಪ್ರದೇಶದ
ನಿವಾಸಿಯಾಗಿದ್ದು, ರಾಜ್ಯದಿಂದ ಪಡೆದ ವಿದ್ಯಾರ್ಥಿವೇತನದ ಸಹಾಯದಿಂದ ಅವರ ಕನಸು ನಿಜವಾಗಿದೆ.

“ವೈದ್ಯೆ ಆಗಬೇಕಾದ ಪ್ರಯಾಣ ಈಗ ಆರಂಭವಾಗಿದೆ. ಸರ್ಕಾರದ ವಿದ್ಯಾರ್ಥಿ ವೇತನಗಳು ಮತ್ತು ನನ್ನ ದಾದಾಜಿ ಬೆಂಬಲ ಹಾಗೂ ನನ್ನ ಕೋಚಿಂಗ್ ಇನ್ಸ್ಟಿಟ್ಯೂಟ್ ನೀಡಿದ ಶುಲ್ಕ ರಿಯಾಯಿತಿಗಳಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ” ಎಂದು ವಿಶಾಖಾ ಹೇಳುತ್ತಾರೆ.

ಆಕೆಯ ತಂದೆಯ ಆದಾಯ ಮನೆಯ ಖರ್ಚು ವೆಚ್ಚಗಳಿಗೆ ಸಾಕಾಗುತ್ತಿತ್ತು. ಅಜ್ಜನ ಪಿಂಚಣಿಯಿಂದ ಬರುವ ಹಣವು ಈಕೆಯ ಕಲಿಕೆಗೆ ನೆರವಾಗುತ್ತಿತ್ತು. ವಿಶಾಖಾ, 10 ನೇ ತರಗತಿಯಲ್ಲಿ 96.17 ಅಂಕಗಳನ್ನು ಗಳಿಸಿದ್ದರು. 2014 ರಲ್ಲಿ ಸರಕಾರದ 75,000 ರೂ.ಗಳ ಪ್ರಿಯದರ್ಶಿನಿ ಪ್ರಶಸ್ತಿಯೂ ಆಕೆಯ ವಿದ್ಯಾಭ್ಯಾಸಕ್ಕೆ ನೆರವಾಗಿದೆ.

Leave a Reply