ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಿರ್ಭಯ ಪ್ರಕರಣದ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ.

ಸೌತ್ ದಿನಜ್‍ಪುರ ಜಿಲ್ಲೆಯಲ್ಲಿ ಬುದ್ಧಿ ಸ್ಥಿಮಿತ ಕಳಕೊಂಡ ಮತಿವಿಕಲ ಆದಿವಾಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

Image result for nirbhaya delhi pics
ಸಾಂದರ್ಭಿಕ ಚಿತ್ರ

ತೀವ್ರ ಚಿಂತಾಜನಕ ಸ್ಥಿತಿಯಲ್ಲಿ ಸೇತುವೆಯೊಂದರ ಕೆಳಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಈ 28ರ ಹರೆಯದ ಯುವತಿಯನ್ನು ರಾಯ್‍ಗುಂಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಜನನಾಂಗದಲ್ಲಿ ಕಬ್ಬಿಣದ ಸರಳು ಹಾಕಿದ ವಿಕೃತ ಸ್ಥಿತಿಯಲ್ಲಿ ಪತ್ತಯಾಗಿತ್ತು.

ಚಿಂತಾಜನಕ ಸ್ಥಿತಿಯಲ್ಲಿರುವ ಈಕೆಯ ಸ್ಥಿತಿ ಇನ್ನೂ ಗಂಬೀರವಾಗಿದೆಯೆಂದು ವೈದ್ಯರು ಹೇಳಿದ್ದಾರೆ. ಘಟನೆಯ ಕುರಿತು ಪೋಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply