ಓ ರಕ್ತಸಾಕ್ಷಿಗಳೇ ನಿಮ್ಮ ಗಮನಕ್ಕೆ..

ರಕ್ತಸಾಕ್ಷಿಯಾಗಿ ಪರಲೋಕವನ್ನು ತಲುಪಿದ ಅವನಲ್ಲಿ ದೇವನು ಕೇಳಿದ.

ನೀನಾ ಇವಾಗ ಬಂದ ಹೊಸಾ ರಕ್ತಸಾಕ್ಷಿ. ಕೆಲವರು ಆವಾಗ ಆವಾಗ ಬರುತ್ತಿರುತ್ತಾರೆ.. ನೀನು ಎಲ್ಲಿಂದ ಬಂದಿದ್ದೀಯಾ ಕಣ್ಣೂರಿನಿಂದಲಾ..?

ಅವನು ತಲೆತಗ್ಗಿಸಿ ಹೇಳಿದ ಹೌದು.

ಹೋ… ಇದೇನು ಹೊಸತು ಅಲ್ಲವಲ್ಲ..! ಆಗಲಿ ಎಷ್ಟು ತಲವಾರು ಏಟು ತಿಂದೆ..?

ದೇಹದ ಗಾಯಗಳನ್ನು ಲೆಕ್ಕೆ ಹಾಕುತ್ತಾ ಅವನು ಹೇಳಿದ 58.

ಉಹ್ಮ್.. ಎಂಬ ಉದ್ಗಾರದೊಂದಿಗೆ ದೇವನೆಂದ ಕಳೆದ ಸಲ ಬಂದವನು 56 ಏಟು ತಿಂದಿದ್ದ, ಎರಡು ಅಂಕ ಜಾಸ್ತಿಯಾಯಿತು. ಇನ್ನು ಶತಕದೊಂದಿಗೆ ಬರುವವನಾರೋ….?

Image result for political murders

ದೇವನು ಅದೇನೋ ಚಿಂತನೆಗಳೊಂದಿಗೆ ಎದ್ದು ನಡೆದ. ಬಾ ನನ್ನ ಜೊತೆ ನಿನಗೆ ಕೆಲವು ವಾಸ್ತವಗಳನ್ನು ತೋರಿಸಿಕೊಡುವೆನು.

ಅವನು ದೇವನನ್ನು ಹಿಂಬಾಲಿಸಿದ.

ಮೇಘಗಳಡೆಯಲ್ಲಿ ಅಲ್ಪ ನಡೆದ ತರುವಾಯ ದೇವನು ಭೂಮಿಯತ್ತ ತನ್ನ ಕೈಬೆರಳನ್ನು ನೀಟಿದ.

ನೋಡು ಅಲ್ಲಿ ಕಾಣುತ್ತಿರುವುದೇನು..?

ದೇವನು ಬೆರಳು ತೋರಿಸಿದ ದಿಕ್ಕಿನತ್ತ ನೋಡಿ ಅವೇಶದಿಂದ ಹೇಳಿದ.

ನನ್ನ ಮನೆ, ನನ್ನ ಪ್ರೀತಿಪಾತ್ರರು.

ದೇವನು ನಗುತ್ತಾ ಹೇಳಿದ ಇಂತಹ ವಿರಹಗಳೂ ಇದೆಯಾ..? ಉಳಿದವುಗಳನ್ನೂ ನೋಡು.

ಅವನು ನೋಟದಲ್ಲಿ ದುಃಖದ ಛಾಯೆಯೂ ಮೂಡತೊಡಗಿತ್ತು.

ಶವಸಂಸ್ಕಾರ ಮುಗಿದ ತನ್ನ ಮನೆ, ಎಲ್ಲೆಡೆಯೂ ನಿಶ್ಯಬ್ದತೆ, ಜನರೆಲ್ಲಾ ಸರಿದು ಹೋಗಿರುವರು. ಮನೆಯ ವರಾಂಡದಲ್ಲಿ ಇದ್ಯಾವುದನ್ನೂ ತಿಳಿಯದ ತನ್ನ ಮೂರು ವರುಷ ಪ್ರಾಯದ ಮಗಳು ಓಡಿ ನಲಿದಾಡುತ್ತಿದ್ದಾಳೆ..,

ಅವನ ಕಣ್ಣಿಂದ ಕಣ್ಣೀರು ಹರಿಯತೊಡಗಿತ್ತು.., ನನ್ನ ಮಗಳು, ಅವನು ಉಚ್ಚಸ್ವರದಲ್ಲಿ ಕೂಗಿದ. ಯಾರೂ ಕೇಳದ ಆ ಶಬ್ದವು ಆಕಾಶದಲ್ಲಿ ಮಾತ್ರ ಪ್ರತಿಧ್ವನಿಸಿತ್ತು.

ಅವನು ತನ್ನ ಮಡದಿಯನ್ನು ಹುಡುಕಿದ.

ಮನೆಯೊಳಗಡೆ ಕತ್ತಲ ಕೋಣೆಯೊಂದರಲ್ಲಿ ಮಲಗಿರುವ ತನ್ನ ಪ್ರೀಯತಮೆ ದುಃಖವನ್ನು ತಾಳಲಾರದೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ.

ತನ್ನ ಮಗಳು ತಾಯಿಯಲ್ಲಿ ಕೇಳುತ್ತಿದ್ದಾಳೆ ಅವನು ಕಿವಿಯಾಳಿಸತೊಡಗಿದ.

ಅಮ್ಮಾ ನನ ತಂದೆಯವರೆಲ್ಲಮ್ಮಾ.

ಮಗಳ ಪ್ರಶ್ನೆಯು ಅವನಲ್ಲಿ ದುಃಖದ ಕಟ್ಟೆಯೊಡೆಯಿತು.. ಜೊತೆಗೆ ಮಡದಿಯ ಅಟ್ಟಹಾಸವೂ.

ಒಂದು ಹನಿ ನೀರನ್ನು ಕೂಡ ಸೇವಿಸದೆ ಮಗನನ್ನು ಕರೆದು ಅಳುತ್ತಿರುವ ಆ ತಾಯಿಯನ್ನು ನೋಡಲು ಅವನಿಂದಾಗಲಿಲ್ಲ.

ಸೇದಿ ಬಿಸಾಕಿದ ಬೀಡಿ ತುಂಡುಗಳ ಸಮೀಪದಲ್ಲಿ ಕುಳಿತಿದ್ದ ತಂದೆಯವರ ಮುಖದಲ್ಲಿ ಉತ್ತರವಿಲ್ಲದ ಅದೆಷ್ಟೋ ಪ್ರಶ್ನೆಗಳು…..

ಸೇದುತ್ತಿದ್ದ ಬೀಡಿಯನ್ನು ಎಸೆದು ಮನೆಯೊಳಗಡೆ ನಡೆದ ಆ ತಂದೆಯನ್ನು ಅವನ ಕಣ್ಣುಗಳು ಹಿಂಬಾಲಿಸಿದವು.

ಮನೆಯೋಳಗಡೆಯ ಅಟ್ಟದಲ್ಲಿ ಯಾವತ್ತೋ ಎತ್ತಿ ಇಟ್ಟಿದ್ದ ಆ ಕಬ್ಬಿಣದ ಪೆಟ್ಟಿಗೆಯಲ್ಲಿ ಅದೇನನ್ನೋ ತಂದೆ ಹುಡುಕುತ್ತಿದ್ದಾರೆ. ನಿಮಿಷಗಳ ಹುಡುಕಾಟದ ನಂತರ ತಂದೆಯವರು ಬಿಚ್ಚಿ ಇಟ್ಟಿದ್ದ ಅವರ ಹಳೇ ಕೂಲಿ ಕಾರ್ಮಿಕ ಸಮವಸ್ತ್ರವನ್ನು ಹೊರತೆಗೆದರು. ಹೃದಯದಲ್ಲಿ ದುಃಖ ಸಮುದ್ರವನ್ನೇ ತಡೆದಿಟ್ಟಿದ್ದ ಆ ತಂದೆಯ ಕಣ್ಣಿಂದ ಒಂದು ಹನಿ ಕಣ್ಣೀರು ನೆಲ ಸೇರಲಿಲ್ಲ.

 

ನೀನೆನು ಸಂಪಾದಿಸಿದೆ…?

ದೇವನ ಪ್ರಶ್ನೆ ಕೇಳಿದ ಅವನು ದುಃಖದಿಂದ ತನ್ನ ಕಣ್ಣುಗಳನ್ನು ಮುಚ್ಚಿದ.

ನಿನ್ನ ತಂದೆಯವರು ಇವಾಗ ಚಿಂತಿಸುವುದಿರುವುದಾದರು ಎನೆಂದು ನಿನಗೆ ತಿಳಿದಿದೆಯಾ…?

ಇಲ್ಲ… ಅವನು ಅಳುತ್ತಾ ಹೇಳಿದ.

ವಯಸ್ಸು ಬಲಹೀನಗೊಳಿಸಿದ ಈ ತೋಳುಗಳಿಂದ, ಇನ್ನು ಭಾರವನ್ನು ಹೊರಲೇಬೇಕು. ಅವನು ಬಿಟ್ಟು ಹೋದ ಪುಟ್ಟ ಮಗಳನ್ನು, ಅವನ ಮಡದಿಯನ್ನೂ, ರೋಗಿಯಾಗಿ ಮಲಗಿರುವ ಅವನ ತಾಯಿಯನ್ನೂ ಸಾಕಬೇಕಾದುದು ನಾನಾಗಿದೆ. ಇನ್ನು ನಾನು ಬಲಹೀನನಾಗಕೂಡದು, ಅಳ ಕೂಡದು… ಇಲ್ಲ ನಾನು ಅಳಲಾರೆ…,

ತಂದೆಯ ಆಲೋಚನೆಗಳನ್ನು ದೇವನು ಅವನಿಗೆ ಹೇಳಿ ಕೇಳಿಸಿದಾಗ ಅವನು ಬೋಬ್ಬಿಟ್ಟು ಅಳತೊಡಗಿದ.

ನೀನೆನು ಸಂಪಾದಿಸಿದೆ….? ದೇವನ ಆ ಪ್ರಶ್ನೆಯನ್ನು ಸ್ವಲ್ಪ ಗಡುಸಿತ್ತು. ನಿನ್ನ ಪ್ರೀತಿಪಾತ್ರರಿಗೆ ಇನ್ನು ಯಾರು ದಿಕ್ಕು…?

ಅವನಿಗೆ ಉತ್ತರವಿರಲಿಲ್ಲ.

ಇನ್ನು ನಿನಗೆ ನಾನು ಬೇರೊಂದು ದೃಶ್ಯವನ್ನು ತೋರಿಸಿ ಕೊಡುತ್ತೇನೆ.. ದೇವನು ಪುನಃ ಬೆರಳು ನೀಟಿದ. ಅವನ ರಾಜಕೀಯ ನಾಯಕ ಮನೆಗಾಗಿತ್ತು ದೇವನು ಬೆರಳು ತೋರಿಸಿದ್ದು.

ಅವನ ಕಣ್ಣಲ್ಲಿ ಕಂಡ ದೃಶ್ಯಗಳು,

ತನ್ನ ರಾಜಕೀಯ ನಾಯಕ ಮತ್ತು ಕುಟುಂಬವು ಸಂತೋಷದಿಂದ ಆಹಾರವನ್ನು ಸೇವಿಸುತ್ತಿದ್ದಾರೆ. ದುಃಖದ ಒಂದೆ ಛಾಯೆ ಕೂಡ ಅಲ್ಲಿ ಇಲ್ಲ. ನಗು, ತಮಾಷೆಗಳೊಂದಿಗೆ ಸುಖ ಸಂತೋಷವು ಅಲ್ಲಿ ನಲಿದಾಡುತ್ತಿತ್ತು.

Image result for car in front of   palace
ಸಾಂದರ್ಭಿಕ ಚಿತ್ರ

ಹೊರಗಡೆ ಕಾವಲುಗಾರ, ಕಾರುಗಳು, ಸುಖಸೌಕರ್ಯಗಳ ಆಡಂಬರವನ್ನಾಗಿದೆ ಅವನಿಗೆ ಕಾಣಲು ಸಾಧ್ಯವಾದದ್ದು.

ಚಿಂತನೆಯಲ್ಲಿ ತನ್ನ ಮನೆ ಮತ್ತು ನಾಯಕನ ಮನೆಯನ್ನು ತಾರತಮ್ಯ ಮಾಡಿ ಅವನು ನೋಡತೊಡಗಿದ.

ನೀನೆನು ಸಂಪಾದಿಸಿದೆ..?

ಅವನು ದೇವನನ್ನು ದಯನೀಯವಾಗಿ ನೋಡಿದ.

ಮತ್ತು ಪ್ರಶ್ನೆಗಳ ಸರಮಾಲೆಯನ್ನು ದೇವನು ಕೇಳಿದ.

ನಿಮ್ಮಲ್ಲಿ ಸತ್ತು ಬಿದ್ದ ಯಾರಾದರೂ ಒಬ್ಬರಲ್ಲಿ ಪ್ರಮುಖನಾದ ನಾಯಕರಿದ್ದರಾ…?

ಉತರವಿಲ್ಲ..,

ವ್ಯಾಪಾರದಲ್ಲಿ ನಷ್ಟ ನಿನಗೂ, ನಿನ್ನ ಪ್ರೀತಿಪಾತ್ರರಿಗೂ. ಲಾಭ ಪಾರ್ಟಿಗೂ ಅದರ ನಾಯಕರಿಗೂ ಇನ್ನಾದರೂ ನಿನ್ನ ಹಿಂಬಾಲಕರು ಚಿಂತಿಸಲಾರರಾ..?

ಉತ್ತರವಿಲ್ಲ..,

ರಕ್ತಸಾಕ್ಷಿಯ ಪಟ್ಟವು ನಿನಗೆ ಇವಾಗ ಭಾರವಾಗುತ್ತಿದೆಯಾ..?

ಉತ್ತರಕ್ಕೆ ಬದಲಾಗಿ ಕಣ್ಣೀರು ಧಾರೆಧಾರೆಯಾಗು ಹರಿಯತೊಡಗಿತ್ತು……

ದಾನವಾಗಿ ನೀಡಿದ ಜೀವನವು ಬಾರವಾಗಿ ಕಿತ್ತು ಬಿಸಾಕಿದ ಮೂರ್ಖರು. ದೇವನು ತುಚ್ಚ ಭಾವನೆಯಿಂದ ನಗುತ್ತಾ ಮುಂದೆ ನಡೆಯತೊಡಗಿದ ಅವನು ಹಿಂದೆಯೂ.

ಹರಿಯತೊಡಗಿದ ಅವನ ಕಣ್ಣೀರು ಒಂದು ಮುಂಗಾರು ಮಳೆಯಾಗಿ ಭೂಮಿಯನ್ನು ಸ್ಪರ್ಶಿಸಿತ್ತು. ಆ ಮಳೆಯು ಅವನ ಮನೆಯನ್ನು….

ಗುಡುಗಿನಂತೆ ಒಂದು ಪ್ರಶ್ನೆ ಮಾತ್ರ ಅವನಲ್ಲಿ ಪ್ರತಿಧ್ವನಿಸುತ್ತಿತ್ತು…..

ನೀನೆನು ಸಂಪಾದಿಸಿದೆ…???

ಕನ್ನಡಕ್ಕೆ:

✍🏽 ಹಸ್ನಾಮೋಳ್.ಕೆ.ಸಿ.ನಗರ

Leave a Reply