ಸಣ್ಣಪುಟ್ಟ ತಲೆ ನೋವಾದರೂ ನಮಗೆ ಸಹಿಸಲು ಸಾಧ್ಯವಿಲ್ಲ. ಜೀವನದಲ್ಲಿ ಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ನೋಡುವಾಗ ಕೆಲವೊಮ್ಮೆ ನಮ್ಮದೇ ದೊಡ್ಡ ಸಮಸ್ಯೆ ಎಂಬಂತೆ ನಮಗೆ ಭಾಸವಾಗುತ್ತದೆ.

ಆದರೆ ಈ ತಾಯಿ ಮಗುವಿನ ಚಿತ್ರ ನೋಡಿದರೆ ನಿಮಗೆ ನಿಮ್ಮ ಎಲ್ಲಾ ಸಮಸ್ಯೆಗಳು ದುಃಖಗಳು ನಗಣ್ಯ ಎಂದು ಭಾಸವಾಗಬಹುದು.

ವಿಂಗ್ ಕಮಾಂಡರ್ ಡಿ ವ್ಯಾಟ್ಸ್ ಪತ್ನಿಯಾದ ಮೇಜರ್ ಕುಮುದ್ ಡೋಗ್ರ ಎಂಬ ಯುವ ಮಹಿಳಾ ಅಧಿಕಾರಿ ತನ್ನ ಐದು ದಿನದ ಮಗುವಿನ ಜೊತೆ ಚಿತ್ರದಲ್ಲಿ ಕಾಣಬಹುದು. ಮೇಜರ್ ಆದರೂ, ಸೇನೆಯ ಕಮಾಂಡರ್ ಆದರೂ ತಾಯಿಯ ಹೃದಯ ತಾಯಿ ಹೃದಯವೇ ಆಗಿರುತ್ತದೆ.

ಈ ಚಿತ್ರ ಯಾವುದೇ ಸಂತೋಷದ ಸಭೆ ಸಮಾರಂಭದ್ದಲ್ಲ. ಯುವ ಅಧಿಕಾರಿ ಮತ್ತು ತಾಯಿ ಆಗಿರುವ ಇವರು ಕೇವಲ 5 ದಿನದ ಮಗಳ ಜೊತೆಗೆ ವಿಮಾನ ಅಪಘಾತದಲ್ಲಿ ಮಡಿದ ತನ್ನ ಗಂಡನ ಅಂತ್ಯಕ್ರಿಯೆಗೆ ಹೋಗುತ್ತಿದ್ದಾರೆ.

ಫೆಬ್ರವರಿ 15 ರಂದು ಮಜುಲಿ ದ್ವೀಪದಲ್ಲಿ ಮೈಕ್ರೊಲೈಟ್ ಹೆಲಿಕಾಪ್ಟರ್ ನಲ್ಲಿದ್ದ ಭಾರತೀಯ ಏರ್ ಫೋರ್ಸ್‌ನ ಇಬ್ಬರು ಪೈಲಟ್ ಗಳು ಮಡಿದಿದ್ದರು. ವಿಂಗ್ ಕಮಾಂಡರ್ ಡಿ ವ್ಯಾಟ್ಸ್ ಅವರಲ್ಲಿ ಒಬ್ಬರು.

ಈ ಚಿತ್ರವು ಸೋಷಿಯಲ್ ಮಾಧ್ಯಮದಲ್ಲಿ ಪೋಸ್ಟ್ ಆದ ಬಳಿಕ ಹಲವರ ಹೃದಯ ತಟ್ಟಿದೆ.

ಮೇಜರ್ ಡೋಗ್ರಾ ಅವರ ಅದಮ್ಯ ಇಚ್ಛಾ ಶಕ್ತಿಗಳನ್ನು ಜನ ಕೊಂಡಾಡಿದ್ದಾರೆ. ದೇಶ ಸೇವೆಯ ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ.

Leave a Reply