ಮಂಗಳೂರು ತಾಲೂಕಿನ ಹಳೆಯಂಗಡಿ ಗ್ರಾಮದ ಬೊಳ್ಳೂರು, ಇಂದಿರಾನಗರದ ದಿವಂಗತ ಮೈದಿನಬ್ಬ ಎಂಬುವವರ ಎಂಟುಮಂದಿ ಹೆಣ್ಣುಮಕ್ಕಳಲ್ಲಿ ಕೊನೆಯವಳಾದ ಆಶಿಯ ಎಂಬುವವರು ಕಳೆದ 15 ವರ್ಷಗಳ ಹಿಂದೆ ಸುರತ್ಕಲ್ ಜನತಾಕೊಲನಿ ನಿವಾಸಿ ಇಬ್ರಾಹಿಂ ಎಂಬುವವರನ್ನು ವಿವಾಹವಾಗಿದ್ದು ದಂಪತಿಗೆ ಎರಡು ಗಂಡುಮಕ್ಕಳು ಜನಿಸಿದ್ದು ಮೊದಲ ಮಗ 13 ವರ್ಷದ ಮೊಹಮ್ಮದ್ ಸವಾದ್ 8ನೇ ತರಗತಿ ಶಾಲೆ ಕಳಿಯುತ್ತಿದ್ದು ಎರಡನೇ ಮಗು 7 ವರ್ಷದ ಮೊಹಮ್ಮದ್ ಸವಾನ್ ಒಂದೆರಡು ವರ್ಷದ ತನಕ ದೈಹಿಕವಾಗಿ ಸರಿಯಾಗಿಯೇ ಇದ್ದು ನಂತರದ ದಿನಗಳಲ್ಲಿ ತನ್ನ ಎರಡೂ ಕಾಲಿನ ಬಲ ಕಳೆದುಕೊಂಡು ಸಂಪೂರ್ಣ ಅಂಗವೈಕಲ್ಯಗೀಡಾಗಿರುತ್ತದೆ.
ಇತ್ತ ಆಶಿಯಾಳ ಗಂಡ ಇಬ್ರಾಹೀಂ ದುರಬ್ಯಾಸದ ದುಷ್ಟ ಚಟ ಹೊಂದಿರೋದ್ದರಿಂದ ಗಂಡನ ಹಿಂಸೆ ತಾಳಲಾರದೆ ಆಶಿಯ ತನ್ನ ಸಹೋದರಿಯರ ಮನೆಯನ್ನು ಆಶ್ರಯಿಸಿ ತನ್ನೆರಡು ಮಕ್ಕಳೊಂದಿಗೆ ದೀನೀ ಚೌಕಟ್ಟಿನಲ್ಲಿ ಬಡತನದ ಜೀವನ ಸಾಗಿಸುತ್ತಿದ್ದಾರೆ.

ಈಗಾಗಲೆ ಊರ,ಪರವೂರ ದಾನಿಗಳಿಂದ ಧನ ಸಹಾಯ ಸಂಗ್ರಹಿಸಿ ಮಂಗಳೂರಿನ ತಜ್ಞ ವೈದ್ಯರುಗಳಲ್ಲಿ ಉನ್ನತ ಪರೀಕ್ಷೆಗೆ ಒಳಪಡಿಸಿದ್ದು,ಅಪೌಷ್ಠಿಕತೆಯಿಂದ ಮಾಂಸಖಂಡಗಳು ಹಾಗೂ ನರನಾಡಿಗಳಲ್ಲಿ ತೊಂದರೆ ಇದೆ ಎಂಬ ತಜ್ಞರು ವರದಿ ನೀಡಿರುತ್ತಾರೆ.
ಹಾಗು ಮಾಂಸಖಂಡದ ತುಂಡೊಂದನ್ನು ತೆಗೆದು ಬೆಂಗಳೂರಿನ ನೀಮಾನ್ಸ್ ಅಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿ ಅದರ ವರದಿಯನ್ನು ಆದರಿಸಿ ಚಿಕಿತ್ಸೆಯನ್ನು ಮುಂದುವರಿಸಬೇಕೆಂದು ಇದಕ್ಕೆಲ್ಲಾ ಹೆಚ್ಚಿನ ಖರ್ಚುವೆಚ್ಚಗಳ ಅಗತ್ಯತೆಗಳಿವೆ ಎಂದು ವೈದ್ಯರು ಸಲಹೆ ನೀಡಿರುತ್ತಾರೆ.

ನಮ್ಮೂರಿನ ರಿಲಾಯನ್ಸ್ ಅಸೋಸಿಯೇಸನ್ ಎಂಬ ಯುವ ಸಂಸ್ಥೆಯೊಂದು ಕಳೆದ ಎರಡು ವರ್ಷಗಳ ಹಿಂದೆ ಗಂಡಸರ ನೆರಳಿಲ್ಲದ ಆಶಿಯಾಳ ಮೂರೂ ಸಹೋದರಿಯರ ಪಾಡನ್ನು ಕಂಡು, ದಾನಿಗಳ ನೆರವಿನಿಂದ ಮನೆಯೋಂದನ್ನು ನಿರ್ಮಿಸಿ ಕೊಟ್ಟಿದ್ದರಿಂದ ಆಶಿಯ ಕೂಡ ಗಂಡನ ಮಾನಸಿಕ,ದೈಹಿಕ ಕಿರುಕುಳದಿಂದ ದೂರವಿದ್ದು ತನ್ನ ಮೂವರು ಸಹೋದರಿಯರೊಂದಿಗೆ ಅದೇ ಮನೆಯನ್ನು ಆಶ್ರಯಿಸಿರುತ್ತಾರೆ.

ಈಗಾಗಲೇ ಬಡತನದ ನೋವಿನಲ್ಲಿ ನೊಂದುಬೆಂದ ಸಂಸಾರ ತನ್ನ ಮಗುವಿನ ಚಿಕಿತ್ಸೆಯನ್ನು ಮುಂದುವರಿಸಲಾಗದ ಪರಿಸ್ಥಿತಿಯಲ್ಲಿದ್ದು , ಮನಗಂಡ ನಾವು ಅಸಾಯಕತೆಯಿಂದ ಸಹ್ರದಯಿಗಳಾದ ತಮ್ಮ ಮುಂದೆ ಆ ಹೆತ್ತ ಕರುಳಿನ ಕರೆಯನ್ನಾಳಿಸಿ ಆ ಮುದ್ದು ಮಗುವಿನ ನಾಳೆಯ ನಗುವನ್ನು ಕಾಣಳಿಕ್ಕಾಗಿ ನಿಮ್ಮಿಂದಾದ ಸಹಾಯವನ್ನು ನೀಡಿರೆಂದು ನಿಮ್ಮ ಮುಂದೆ ಈ ಮನವಿಯನ್ನು ನೀಡುತ್ತಿದ್ದೇವೆ.

: ಆಶಿಯಾಳ ಅಂಗವೈಕಲ್ಯ ಗೀಡಾದ ಮಗುವಿನ ಪರವಾಗಿ.

: ಅದ್ದಿ ಬೊಳ್ಳೂರು
ಪತ್ರಕರ್ತರು/ಸಾಮಾಜಿಕ ಕಾರ್ಯಕರ್ತರು.

Phone. : 7760556104
Whatsapp : 9986430786
E-mail : [email protected]
“””””””””””””””””””””””””””””””””””””””

: ಮಗುವಿನ ಹೆತ್ತವರ ಬ್ಯಾಂಕ್ ವಿವರ

ASIA.
A/c NO : 0637101206996.
CANARA BANK .
HALEANGADI BRANCH.
NEKARA MAHAL, NH.66. HALEANGADY. POST.
MANGALORE-574146.
IFSC CODE CNRB0000637
—————————————
Contect Number
Asia : +918197320796
Adress :
4rth cross, Neae Reliance Bavana, Iniranagara, Haleangadi post, Mangalore-574146.

Leave a Reply