ಮಂಡ್ಯ: ಹಲವಾರು ಮಂದಿಯನ್ನು ಬಲಿ ಪಡೆದ ದೇವಸ್ಥಾನ ವಿಷ ಪ್ರಸಾದ ದುರಂತಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ವ್ಯವಸ್ಥಾಪಕ ಮಾದೇಶ್ ಎಂಬವನ ಪತ್ನಿ ಅಂಬಿಕಾ ಮಹಿಳೆ ನಾನೇ ವಿಷ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಪಬ್ಲಿಕ್ ಟಿವಿ ವರದಿ ಮಾಡಿದೆ.
ಎರಡು ದಿನಗಳ ಹಿಂದೆ ಅಂಬಿಕಾ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆ ಮೇರೆಗೆ ಪ್ರಸಾದದಲ್ಲಿ ವಿಷ ಹಾಕಿದ್ದೇನೆ ಎಂದು ಹೇಳಿದ್ದಾಳಂತೆ. ಇಂದು ರಾತ್ರಿ ಸುಳ್ವಾಡಿ ಮಾರಮ್ಮ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ಪೂಜಾರಿ ಮಹದೇವ ಮತ್ತಿತ್ತರ ಬಂಧನ ಸಾಧ್ಯತೆಗಳಿವೆ. ಎಲ್ಲ ಆರೋಪಿಗಳನ್ನು ಇಂದು ರಾತ್ರಿ ಅಥವಾ ನಾಳೆ ಕೊಳ್ಳೇಗಾಲ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.ಇಂದು ರಾತ್ರಿ ಸಾಲೂರು ಮಠದ ಇಮ್ಮಡಿ ಮಹದೇವಸ್ವಾಮಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಕೊಳ್ಳೇಗಾಲ ಡಿವೈಎಸ್ ಪಿ ಪುಟ್ಟಮಾದಯ್ಯ ನೇತೃತ್ವದ ತಂಡ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.ಯಾರೋ ಅಡುಗೆ ಭಟ್ಟರೇ ವಿಷ ಹಾಕಿದ್ದಾರೆ ಎಂದು ಹೇಳಿದ್ದರು. ನಾನೇ ವಿಷ ಹಾಕಿದ್ದರೆ ನಾನು ತಿಂದು ನನ್ನ ಮಗಳಿಗೂ ಕೊಡುತ್ತ ಇದ್ದೆನೆ. ಪ್ರಸಾದ ತಿಂದು ನನ್ನ ಮಗಳು ಸತ್ತಿದ್ದಾಳೆ ಎಂದು ಚಿಕಿತ್ಸೆಯ ನಡುವೆ ಗೋಳಾಡಿಕೊಂಡು ಕಳೆದುಕೊಂಡ ಪುತ್ರಿಯನ್ನು ನೆನೆಸಿಕೊಂಡ ಅಡುಗೆ ಭಟ್ಟ ಪುಟ್ಟಸ್ವಾಮಿ ಕಣ್ಣೀರು ಹಾಕಿದ್ದರು.

original News Source : Public Tv

Leave a Reply