ಇಂದೋರ್: “ಸೌಂದರ್ಯ ಕೆಡುತ್ತದೆ ಎಂಬ ಕಾರಣದಿಂದ ನಗರ ಪ್ರದೇಶಗಳ ತಾಯಂದಿರು ತಮ್ಮ ಮಗುವಿಗೆ ಸ್ತನ್ಯಪಾನ ಮಾಡಲು ಬಯಸುವುದಿಲ್ಲ” ಎಂದು ಮಧ್ಯಪ್ರದೇಶ ರಾಜ್ಯಪಾಲ ಆನಂದಿಬೇನ್ ಪಟೇಲ್ ಹೇಳಿದ್ದಾರೆ.

ಅವರು ಇತ್ತೀಚೆಗೆ ಇಂದೋರ್ ನ ಮಾಖೇಡಿ ಅಂಗನವಾಡಿ ಸೆಂಟರ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಮಕ್ಕಳ ಜನನ ಆದ ಕೂಡಲೇ ಅವರಿಗೆ ಬಾಟಲಿ ಹಾಲನ್ನು ನೀಡಲಾಗುತ್ತದೆ. ಇದರಿಂದ ಅವರ ಭವಿಷ್ಯ ಹಾಳಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗುಜರಾತ್‌ನ ಮೊದಲ ಏಕೈಕ ಮಹಿಳಾ ಮುಖ್ಯಮಂತ್ರಿಯಾಗಿದ್ದರು ಆನಂದಿ ಬೇನ್. ಅವರು ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಒಮ್ಮೆ ಶಾಲೆಯ ಪಿಕ್ನಿಕ್ ಸಮಯದಲ್ಲಿ ಮುಳುಗಿ ಹೋದ ಇಬ್ಬರು ಯುವತಿಯರನ್ನು ಉಳಿಸಲು ಕೊಳದೊಳಗೆ ಹಾರಿದ್ದರು. ಅವರಿಗೆ ರಾಷ್ಟ್ರಪತಿ ಶೌರ್ಯ ಪ್ರಶಸ್ತಿಯೂ ಸಿಕ್ಕಿದೆ. ಆ ಬಳಿಕ ಅವರು ಸಕ್ರಿಯ ರಾಜಕೀಯಕ್ಕೆ ಸೇರಿದರು.

Leave a Reply