ರಿಷಿ (ಸೆಂಟರ್ ಹುಡುಗ) ಒಂದು ವಾರದವರೆಗೆ ನಿದ್ರಿಸಲಿಲ್ಲ. ಯಾಕೆಂದರೆ ಅವರು ಹೊಸ ಇತಿಹಾಸ ಬರೆದರು. ಫುಟ್ಬಾಲ್ ಆಟಕ್ಕೂ ಮುಂಚೆ ತಂಡದ ಆಟಗಾರರು ಸೆಂಟರ್ ಬಾಲ್ ಬಾಯ್ ಜೊತೆಗೆ ಕ್ರೀಡಾಂಗಣಕ್ಕೆ ಪಾದಾರ್ಪಣೆಗೈಯುತ್ತಾರೆ.

ಈ ಬಾರಿಯ ವಿಶ್ವ ಕಪ್ ಪಂದ್ಯದಲ್ಲಿ ಬಾಲ್ ಬಾಯ್ ಆಗುವ ಮೂಲಕ ಭಾರತದ ರಿಶಿ ತೇಜ್  ಮೊಟ್ಟಮೊದಲ ಭಾರತೀಯ ಬಾಲ್ ಬಾಯ್ ಆಗಿ ಇತಿಹಾಸದ ಪುಟಗಳಲ್ಲಿ ಹೆಸರು ದಾಖಲಿಸಿದರು. ಬೆಲ್ಜಿಯಂ ಮತ್ತು ಪನಾಮ ನಡುವಿನ ಪಂದ್ಯದಲ್ಲಿ ಹತ್ತು ವರ್ಷದ ರಿಷಿಗೆ ಈ ಅವಕಾಶ ಸಿಕ್ಕಿದೆ.

“ನಾನು ತುಂಬಾ ಉತ್ಸುಕನಾಗಿದ್ದೇನೆ, ಅದನ್ನು ನಿಮಗೆ ಅಳೆಯಲು ಸಾಧ್ಯವಿಲ್ಲ. ಇದು ನಿಜಾನಾ ಕನಸಾ ಎಂಬುದರಿಂದ ನಾನಿನ್ನೂ ಹೊರ ಬಂದಿಲ್ಲ. ರಷ್ಯಾದಲ್ಲಿ ಪ್ರತಿ ಕ್ಷಣವನ್ನೂ ನಾನು ಆಸ್ವಾದಿಸುತ್ತೇನೆ. ಪ್ರತಿ ಪಂದ್ಯವನ್ನು ನಾನು ಗಮನವಿಟ್ಟು ವಿಶ್ಲೇಷಿಸುತ್ತೇನೆ” ಎಂದು ರಿಷಿ ಹೇಳುತ್ತಾರೆ.

Leave a Reply