ಎರಡನೇ ಮಹಾಯುದ್ಧವು ಇತಿಹಾಸದಲ್ಲಿ ಅತ್ಯಂತ ಮಾರಣಾಂತಿಕ ಯುದ್ಧವಾಗಿದೆ. ಎರಡನೇ ವಿಶ್ವಯುದ್ಧ ಬಹುಶಃ ನಿಮಗೆ ತಿಳಿದಿರದ ಕೆಲವು ಆಸಕ್ತಿದಾಯಕ ಸತ್ಯಗಳು ಇಲ್ಲಿವೆ. ಇದರಲ್ಲಿ 30 ದೇಶಗಳು ಪಾಲುಗೊಂಡಿತ್ತು, ಇದರಿಂದಾಗಿ 50 ದಶಲಕ್ಷಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.

  • ಎರಡನೇ ವಿಶ್ವಯುದ್ಧದಲ್ಲಿ ಮಿತ್ರ ಪಡೆಗಳು ಬರ್ಲಿನ್ ಮೇಲೆ ಮಾಡಿದ ಬಾಂಬ್ ದಾಳಿಯಲ್ಲಿ ಬರ್ಲಿನ್ ಮೃಗಾಲಯದಲ್ಲಿ ಕೇವಲ ಒಂದು ಆನೆಯ ಸಾವಿಗೆ ಕಾರಣವಾಗಿತ್ತು.
  • 13-17 ವಯಸ್ಸಿನ 2 ಮಿಲಿಯನ್ ಜರ್ಮನ್ ಮಹಿಳೆಯರನ್ನು ರೆಡ್ ಆರ್ಮಿ ಅತ್ಯಾಚಾರ ಮಾಡಿದೆ.
  • ಎರಡನೇ ಮಹಾಯುದ್ಧದ ಸಮಯದಲ್ಲಿ, ಜರ್ಮನ್ ಶಬ್ದದ ಹೆಸರು ಉಚ್ಛರಿಸುವುದನ್ನು ತಪ್ಪಿಸಲು ಅಮೆರಿಕನ್ನರು “ಹ್ಯಾಂಬರ್ಗರ್” ಬದಲಿಗೆ “ಲಿಬರ್ಟಿ ಸ್ಟೀಕ್” ಎಂದು ಕರೆಯುತಿದ್ದರು.
  • ಅಡಾಲ್ಫ್ ಹಿಟ್ಲರನ ಸೋದರಳಿಯ ವಿಲಿಯಂ ಹಿಟ್ಲರ್ ಯು.ಎಸ್ ನೌಕಾದಳದಲ್ಲಿ ಹಿಟ್ಲರ್ ವಿರುದ್ಧ ಹೋರಾಡಿದ್ದ.
  • ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನಿನ ಅತಿದೊಡ್ಡ ಗೂಢಚಾರ ಪಡೆಯು ಮೆಕ್ಸಿಕೊದಲ್ಲಿ ನೆಲೆಗೊಂಡಿತ್ತು.
  • ಎರಡನೇ ಮಹಾಯುದ್ಧದಲ್ಲಿ , ಯು-ಬೋಟ್ಗಳಲ್ಲಿ ಸೇವೆ ಸಲ್ಲಿಸಿದ 40,000 ಜನರಲ್ಲಿ ಕೇವಲ 10,000 ಜನರು ಮಾತ್ರವೇ ಹಿಂದಿರುಗಿದರು.
  • U.S. ಬಜೆಟ್ 1940 ರಿಂದ 1945 ರ ಅವಧಿಯಲ್ಲಿ $ 1.9 ಶತಕೋಟಿಯಿಂದ $ 59.8 ಶತಕೋಟಿಗೆ ಹೆಚ್ಚಾಯಿತು.
  • ಆಸಕ್ತಿದಾಯಕ ಸತ್ಯವೆಂದರೆ ಎರಡನೇ ಮಹಾಯುದ್ಧದ ಸಮಯದಲ್ಲಿ, ಲೋಹದ ಕೊರತೆಯಿಂದಾಗಿ ಆಸ್ಕರ್ನ ಪ್ರತಿಮೆಗಳು ಲೋಹದ ಬದಲಿಗೆ ಬಣ್ಣದ ಪ್ಲಾಸ್ಟರ್ನಿಂದ ಮಾಡಲ್ಪಟ್ಟಿದ್ದವು .

Leave a Reply