ನವದೆಹಲಿ: ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಧಾನ ಪ್ರಶ್ನೆಯಾಗಿದ್ದ ರೈತರ ಸಾಲ ಮನ್ನಾ ಪ್ರಸ್ತಾಪ ಮುಂದಿನ ಮಹಾಚುನಾವಣೆಯಲ್ಲೂ ಮುನ್ನಲೆಗೆ ಬರುವ ಸ್ಪಷ್ಟ ಸೂಚನೆ ಎದ್ದು ಕಾಣುತ್ತಿದೆ. ದೇಶದ ರೈತರ ಸಾಲ ಮನ್ನಾ ಮಾಡುವ ತನಕ “ನಿಮ್ಮನ್ನು ನಿದ್ದೆ ಮಾಡಲು ಬಿಡುವುದಿಲ್ಲ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ – ಅನ್ನದಾತರಿಗೆ ಸಹಾಯಹಸ್ತ ಚಾಚುವ ಕೆಲಸ ಆರಂಭಿಸಲಾಗಿದೆ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದಲ್ಲಿ ತಮ್ಮ ಪಕ್ಷದ ಹೊಸ ಸರ್ಕಾರಗಳು ಪ್ರಮಾಣ ವಚನ ಸ್ವೀಕರಿಸಿದ ಕೇವಲ 6 ತಾಸುಗಳಲ್ಲಿ ರೈತರ ಸಾಲ ಮನ್ನಾ ಮಾಡಿವೆ, ರಾಜಸ್ಥಾನದಲ್ಲೂ ಅತಿಶೀಘ್ರದಲ್ಲೇ ಘೋಷಣೆ ಹೊರಬೀಳಲಿದೆ, ಬಿಜೆಪಿ ಸರ್ಕಾರಗಳೂ ನಮ್ಮನ್ನು ಅನುಸರಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಮೋದಿ ಸರ್ಕಾರ ರೈತರ ಒಂದೇ ಒಂದು ರೂಪಾಯಿಯ ಸಾಲ ಮನ್ನಾ ಮಾಡಿಲ್ಲ, ಆದರೆ ದೇಶದ 15 ಆಗ ಉದ್ಯಮಿಗಳಿಗೆ 3.5 ಲಕ್ಷ ಕೋಟಿ ರೂಗಳಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆರೋಪಿಸಿದರು. ನೋಟು ನಿಷೇಧ ‘ಜಗತ್ತಿನ ಅತಿದೊಡ್ಡ ಹಗರಣ’ ಎಂದು ಟೀಕಿಸಿದ ರಾಹುಲ್ ಗಾಂಧಿ ಬಿಜೆಪಿ ಸರ್ಕಾರ ಬಡವರ ಹಣವನ್ನೆಲ್ಲಾ ಕಸಿದುಕೊಂಡು ಶ್ರೀಮಂತರ ಕಿಸೆಗಳನ್ನು ತುಂಬಿಸಿದೆ ಎಂದು ದೂರಿದರು.
ಒಂದು ವೇಳೆ ಎನ್‌ಡಿಎ ಸರ್ಕಾರ ರೈತರ ಸಾಲ ಮನ್ನಾ ಮಾಡದಿದ್ದಲ್ಲಿ 2019ರ ಚುನಾವಣೆಯಲ್ಲಿ ಗೆದ್ದ ನಂತರ ನಾವೇ ಆ ಕಾರ್ಯ ಮಾಡುತ್ತೇವೆ ಎಂದು ಸಂಸತ್ ಅಧಿವೇಶನಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.

Leave a Reply