ತುಮಕೂರು: ಕನ್ನಡದ ಹುಡುಗ ಹಾಗೂ ಭಾರತೀಯ ಸಂಸ್ಕೃತಿಗೆ ಮಾರುಹೋದ ಅಮೆರಿಕಾ ಯುವತಿ ಹಿಂದೂ ಸಂಪ್ರದಾಯದಂತೆ ಇಲ್ಲಿ ಮದುವೆಯಾಗಿದ್ದಾಳೆ.

ಜಿಲ್ಲೆಯ ತೋವಿನಕೆರೆ ಸಮೀಪದ ಉಪ್ಪಾರಪಾಳ್ಯದ ತೋಟದಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕದ ನ್ಯೂಜೆರ್ಸಿಯಲ್ಲಿ ವಿಜ್ಞಾನಿಯಾಗಿರುವ ಟಾರಾ ಹಾಗೂ ಬೆಂಗಳೂರಿನ ಡಾ. ಅಜಯ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅಮೆರಿಕದಲ್ಲಿ ಕಲಿಯುತ್ತಿದ್ದಾಗ ಟಾರಾ ಅಜಯ್ ಪರಿಚಯ ಪ್ರೀತಿ ಪ್ರೇಮದ ಹಂತಕ್ಕೆ ತಲುಪುತ್ತದೆ. ಬಳಿಕ ಟಾರಾ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆಯನ್ನು ಅಜಯ್ ಮುಂದೆ ವ್ಯಕ್ತಪಡಿಸಿದ್ದು ಟಾರಾ ಆಸೆಯಂತೆ ಅಜಯ್ ತನ್ನ ತಂದೆಯ ಸ್ನೇಹಿತರಾದ ಶ್ರೀಕಂಠ ಪ್ರಸಾದ್ ಅವರ ತೋಟದಲ್ಲಿ ಮದುವೆ ಆಗಿದ್ದಾರೆ.

Leave a Reply