ಸ್ಯಾಂಡ್ವಿಚ್ ಎಂಬ ಗುಣನಾಮವು 18ನೇ ಶತಮಾನದ ಹೆಸರಾಂತ ಇಂಗ್ಲೀಷ್ ಶ್ರೀಮಂತ ವ್ಯಕ್ತಿಯಾದ ಜಾನ್ ಮೊಂಟೆಗೊ, ನಾಲ್ಕನೆಯ ಎರ್ಲ್ ಸ್ಯಾಂಡ್ವಿಚ್‍ರವರ ನೆನಪಿಗಾಗಿ ಇರಿಸಲಾದ ಹೆಸರಾಗಿದೆ.

ಎರ್ಲ್‍ಗೆ ಇಸ್ಪಿಟಾಟ ಆಡುವುದು ಅತಿ ಪ್ರಿಯವಾಗಿತ್ತು. ಊಟದ ಸಮಯವಾದಾಗ ಆಟವಾಡುವುದನ್ನು ನಿಲ್ಲಿಸುವುದು ಆತನಿಗೆ ಇಷ್ಟವಿರಲಿಲ್ಲ.
ಆಟ ಆಡುವಾಗ ಪ್ಲೇಟಿನಲ್ಲಿ ಚೂರಿಯಿಂದ ಕತ್ತರಿಸಿ ಊಟ ಸೇವಿಸುವುದು ಮತ್ತು ಆಟದ ಕಡೆ ಗಮನಕೊಡುವುದು ಅಸ್ತವ್ಯಸ್ತವೆನ್ನಿಸುತ್ತಿತ್ತು. ಹಾಗಾಗಿ ಎರ್ಲ್ ತನ್ನ ಸೇವಕರಿಗೆ ಎರಡು ತುಂಡು ಬ್ರೆಡ್‍ನ ನಡುವೆ ಬೇಯಿಸಿದ ಮಾಂಸವನ್ನು ಹೊಂದಿಸಿ ತರಲು ಆಜ್ಞೆಕೊಟ್ಟನು. ನಂತರ ಅದು ಸ್ಯಾಂಡ್ವಿಚ್ ಎಂದೇ ಪ್ರಸಿದ್ಧಿ ಪಡೆಯಿತು.

Leave a Reply