ನ್ಯಾನೋ ಕಥೆ

ಹಸಿವಿನಿಂದ ಚಡಪಡಿಸುತ್ತಿದ್ದ ಆ ಅಜ್ಜಿಗೆ, ಆಕೆ ಹಿಂದೊಮ್ಮೆ ಊರ ದಾರಿಯ ತುಂಬಾ ನೆಟ್ಟಿದ್ದ ಮಾವಿನಮರಗಳ ದಾರಿ ಮರೆತಿತ್ತು. “ನೀವು ನೆಟ್ಟ ಮರಗಳು ಫಲ ನೀಡುವುದಿಲ್ಲ”ವೆಂದು ಕಪಟಿ ಜ್ಯೋತಿಷಿ ಹೇಳಿದ್ದ ಭವಿಷ್ಯ ಪರೋಕ್ಷವಾಗಿ ಸತ್ಯವೇ ಆಗಿತ್ತು. ಯಾರ ನೆರಳೂ,ನೆರವೂ ಸಿಗದೆ ವೃದ್ದಾಶ್ರಮ ಸೇರಿದ್ದ ಅಜ್ಜಿಗೆ ಹಸಿವು ಮಾತ್ರ ಜೊತೆಯಾಗಿತ್ತು.

ಊರ ದಾರಿಯ ತುಂಬಾ ಹಣ್ಣು ತುಂಬಿ ಗಮನ ಸೆಳೆಯುತಿದ್ದ ಮಾವಿನಮರಗಳ ‘ನೆರಳಿನಲ್ಲಿ’ ಹಸಿವು ತಣಿಸಲು ಜನರ ಹಿಂಡಿತ್ತು.

Leave a Reply