ಇಂದೋರ್: ಅತಿಥೇಯ ಶ್ರೀಲಂಕಾ‌ ವಿರುದ್ಧ ನಡೆಯುತ್ತಿರುವ ಎರಡನೆಯ ಟೀಟ್ವೆಂಟಿ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತವು 261 ರನ್‌ಗಳ ಬೃಹತ್‌ ಸವಾಲನ್ನು ಶ್ರೀಲಂಕಾ ತಂಡಕ್ಕೆ ನೀಡಿದೆ. ಟಾಸ್ ಸೋತು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾ ಪ್ರತಿಯಾಗಿ ಭಾರೀ ಬೆಲೆ ತೆರಬೇಕಾಯಿತು.

ಆರಂಭಿಕ ಜೋಡಿಗಳಾದ ರೋಹಿತ್ ಶರ್ಮಾ ಹಾಗು ಕನ್ನಡಿಗ ಕೆಎಲ್ ರಾಹುಲ್ ದಂಡಿಸುತ್ತಲೇ ಸಿಕ್ಸರ್ ಬೌಂಡರಿಗಳ ಸುರಿಮಳೆಗೈದರು. ಹಂಗಾಮಿ ನಾಯಕ, ರೋ-ಹಿಟ್ ಖ್ಯಾತಿಯ ರೋಹಿತ್ ಶರ್ಮಾ ದಾಖಲೆಯ ಭರ್ಜರಿ 118 (42) ಶತಕವನ್ನು ದಾಖಲಿಸಿದರು. ಅದರಲ್ಲಿ 10 ಭರ್ಜರಿ ಸಿಕ್ಸರ್ ಹಾಗೂ 12 ಬೌಂಡರಿಗಳು ಒಳಗೊಂಡಿದ್ದವು. ಕೆ.ಎಲ್. ರಾಹುಲ್ ಸಿಡಿಲಬ್ಬರದ 89 ರನ್ ತಲುಪಿದಾಗ ಡಿಕ್‌ವೆಲ್ಲಾ ಹಿಡಿದ ಅದ್ಭುತ ಕ್ಯಾಚಿಗೆ ಔಟಾದರು. ಎಂಮ್.ಎಸ್ ದೋನಿ 28, ಪಾಂಡ್ಯ‌ 10 ರನ್‌ಗಳ ಅಮೋಘ ಕೊಡುಗೆಯಿಂದ 261 ರನ್‌ಗಳ ದಾಖಲೆ ಗುರಿಯನ್ನು ಅತಿಥೇಯರಿಗೆ ನೀಡಿದೆ. ಶ್ರೀಲಂಕಾ ಈ ಬೃಹತ್ ಮೊತ್ತವನ್ನು ಹೇಗೆ ಹಿಂಬಾಲಿಸುತ್ತದೆ ಎಂದು ಕಾದು ನೋಡಬೇಕಾಗಿದೆ.

Leave a Reply