ಫತೇಹ್ ಪುರ್: ಹನ್ನೆರಡರ ಬಾಲೆಯೊಬ್ಬಳು ತನಗಿಂತ ಎರಡು ವರ್ಷ ಹಿರಿಯನಾದ ಒಂಬತ್ತನೇ ತರಗತಿಯ ಗೆಳೆಯನೊಂದಿಗೆ ಸೇರಿಕೊಂಡು ತನ್ನನ್ನು ದತ್ತು ಪಡೆದ ತಾಯಿಯನ್ನೇ ಕೊಂದ ಘಟನೆ ಫತೇಹ್ ಪುರ್ ನ ತುರಬ್ ಅಲಿ ಕಾ ಪೂರ್ವ ದಲ್ಲಿ ನಡೆದಿದೆ.
ಬಾಲಾಪರಾಧಿಗಳಾದ ಇಬ್ಬರೂ ೪೫ ರ ಹರೆಯದ ದತ್ತು ತಾಯಿ ಯನ್ನು ಮಧ್ಯೆರಾತ್ರಿ ಕೊಂದು ಬೇರೊಂದು ಕೋಣೆಯಲ್ಲಿ ಕೂಡಿ ಹಾಕಿ ಬೇರೆಡೆಗೆ ತೆರಳಿದ್ದು ತದನಂತರ ಮರುದಿನ ತಮ್ಮ ಮೊಬೈಲ್ ಫೋನ್ ಗಳನ್ನು ಜಜ್ಜಿಹಾಕಿದ್ದರು. ‌ಬಾಲಕಿ ಮಧ್ಯಾಹ್ನ ದ ವೇಳೆ ಮನೆಗೆ ತೆರಳಿ ಪಕ್ಕದ ಮನೆಯವರಲ್ಲಿ ತನ್ನ ದತ್ತು ತಾಯಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿಲ್ಲವೆಂದು ಹೇಳಿಕೊಂಡಿದ್ದಳು. ಮಹಿಳೆಯು ಮೃತ ಪಟ್ಟಿದ್ದನ್ನು ಎಲ್ಲರೂ ಸ್ವಾಭಾವಿಕ ಮರಣವೆಂದು ಭಾವಿಸಿದ್ದರಾದರೆ ನೆರೆಮನೆಯವರು ದತ್ತು ತಾಯಿಯು ಸಾಯುವ ಹಿಂದಿನ ಬಾಲಕಿಯನ್ನು ಹೊಡೆದು ಆಕೆಯ ಗೆಳೆಯನಿಗೆ ಅಲ್ಲಿಂದ ಹೊರನಡೆಯುವಂತೆ ತಿಳಿಸಿದ್ದರಿಂದ ಸಂಶಯಗೊಂಡು ಪೋಲೀಸರಿಗೆ ತಿಳಿಸಿದ್ದಾರೆ.
ವಿಚಾರಣೆಯ ವೇಳೆ ಬಾಲಕಿಯು”ತನ್ನನ್ನು ಮೂರು ತಿಂಗಳಿನವಳಿರುವಾಗ ದತ್ತು ತೆಗೆದುಕೊಂಡಿದ್ದರಿಂದ ಅವರು ನನ್ನನ್ನು ಪ್ರೀತಿಸಲೇ ಇಲ್ಲ.”ಎಂದು ಕೊಲೆಯ ಕುರಿತು ತಪ್ಪೊಪ್ಪಿಕೊಂಡಿದ್ದಾಳೆ. ಮೃತ ಮಹಿಳೆಯ ಪತಿಯನ್ನು ಮುಂಬೈಯಿಂದ ಕರೆಸಿಕೊಳ್ಳಲಾಯಿತಲ್ಲದೇ ಇಬ್ಬರೂ ಬಾಲಾಪರಾಧಿಗಳನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Leave a Reply