ರಾಂಚಿ: ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿರುವ ಲಾಲು ಅವರು, ತನ್ನನ್ನು ವರ್ಣ ಬೇಧ ನೀತಿ ವಿರೋಧಿ ಹೋರಾಟಗಾರ ನೆಲ್ಸನ್ ಮಂಡೇಲಾ, ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜತೆ ಹೋಲಿಸಿಕೊಂಡಿದ್ದಾರೆ.

ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಮ್ಮ ಪ್ರಯತ್ನದಲ್ಲಿ ವಿಫಲರಾಗಿದ್ದರೆ, ಇತಿಹಾಸವು ಅವರನ್ನು ಖಳನಾಯಕರನ್ನಾಗಿ ಪರಿಗಣಿಸಲಿದೆ. ಪಕ್ಷಪಾತ, ಜನಾಂಗೀಯ ಮತ್ತು ಜಾತಿ-ಮನಸ್ಸಿನ ಮನಸ್ಸುಗಳಿಗಾಗಿ ಅವರು ಇನ್ನೂ ಖಳನಾಯಕರು. ‌ಪೂರ್ವಗ್ರಹಗಳುಳ್ಳವರು, ಅವರಿಂದ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಲಾಲು ಟ್ವೀಟ್ ಮಾಡಿದ್ದಾರೆ.

‘ಬಿಜೆಪಿಯು ತನ್ನ ಲಾಭಕ್ಕಾಗಿ ಮತ್ತು ಮತ ಗಳಿಸುವುದಕ್ಕೋಸ್ಕರ ಪ್ರತಿಪಕ್ಷಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಬಿತ್ತುವ ಕೆಟ್ಟ ರಾಜಕೀಯ ಮಾಡುತ್ತಿದೆ’ ಎಂದು ಲಾಲು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

Leave a Reply