• ಅದ್ಯಾತ್ಮಿಕತೆಯನ್ನು ಸೂಚಿಸುವುದರೊಂದಿಗೆ ಅಗರ್ಬತ್ತಿ ಶಾಂತಿ ಹಾಗು ಸಮೃದ್ಧಿಯ ಪ್ರತೀಕವಾಗಿದೆ. ಅದರ ಉತ್ತಮ ಪರಿಮಳ ನಿಮ್ಮನ್ನು ಶಾಂತಪಡಿಸುವುದಾದರೂ ಸಿಗರೇಟಿಗಿಂತ ಹೆಚ್ಚು ಹಾನಿಯುಂಟು ಮಾಡಬಹುದು ಎಂದು ಅಧ್ಯಯನವೊಂದು ತಿಳಿಸಿದೆ.

•2015 ರ ಚೀನಿ ಅಧ್ಯಯನದ ಪ್ರಕಾರ ಅಗರ್ಬತ್ತಿಯಿಂದ ಹೊರಹೊಮ್ಮುವ ಹೊಗೆಯಲ್ಲಿ ಸಣ್ಣ ಕಣಗಳಿದ್ದು ಅವು ಗಾಳಿಯಲ್ಲಿ ಚದುರಿಹೋಗುತ್ತದೆ. ಈ ವಿಷಕಾರಿ ಕಣಗಳು ಜಿವೆಕೋಶಗಳಿಗೆ ಹಾನಿಕಾರಕ.

•ಈ ಅಧ್ಯಯನದ ಪ್ರಕಾರ ಸುಗಂಧಭರಿತ ಹೊಗೆಯಲ್ಲಿ ಕ್ಯಾನ್ಸರಿಗೆ ಕಾರಣವಾಗುವ mutagenic , genotoxic ಹಾಗೂ cytotoxic ಎಂಬ ವಿಷಕಾರಿ ಅಂಶಗಳಿವೆ. ಇವು ಕ್ಯಾನ್ಸರ್ ಹಾಗೂ ಶ್ವಾಸಕೋಶದ ತೊಂದರೆಗಳಲ್ಲದೆ ಡಿ. ಎನ್. ಎ ಗಳಲ್ಲಿ ಋಣಾತ್ಮಕ ಬದಲಾವಣೆ ಉಂಟು ಮಾಡುತ್ತದೆ.

• ಶ್ವಾಸದ ಮೂಲಕ ಒಳ ಸೇರುವ ಹೋಗೆ ಶ್ವಾಸಕೋಶದಲ್ಲೇ ಸಿಕ್ಕಿಕೊಳ್ಳುತ್ತದೆ. 64 ಸಂಯುಕ್ತಗಳಿರುವ ಈ ಕಣಗಳು ಆರೋಗ್ಯಕ್ಕೆ ಹಾನಿಕಾರಕ.

ಮೂಲ ವರದಿ : ಟೈಮ್ಸ್ ಆಫ್ ಇಂಡಿಯಾ

Leave a Reply