ರಿಯಾದ್: ಬಾಲಿವುಡ್ ಸಿನೆಮಾ ಗೋಲ್ಡ್ ಸೌದಿ ಅರೇಬಿಯಾದಲ್ಲಿ ಬಿಡುಗಡೆಗೊಳ್ಳಲಿದ್ದು ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಮೊದಲ ಚಿನ್ನದ ಪದಕ ದೊರಕಿದ ಕುರಿತು ಚಿತ್ರಕತೆಯನ್ನು ಹೊಂದಿದೆ. ಗೋಲ್ಡ್ ಸೌದಿಯಲ್ಲಿ ಪ್ರಪ್ರಥಮವಾಗಿ ಪ್ರದರ್ಶನಗೊಳ್ಳುತ್ತಿರುವ ಪ್ರಥಮ ಬಾಲಿವುಡ್ ಸಿನೆಮಾ ಎಂಬ ದಾಖಲೆಗೆ ಸೇರ್ಪಡೆಯಾಗಲಿದೆ. ಸಿನೆಮಾದಲ್ಲಿ ನಾಯಕನಾಗಿ ಅಕ್ಷಯ್ ಕುಮಾರ್ ಇದ್ದು ಅವರೇ ಚಿತ್ರದ ಬಿಡುಗಡೆಯ ಕುರಿತು ಟ್ವಿಟರ್‍ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

1948ರ ಒಲಿಂಪಿಕ್ಸ್ ಚಿನ್ನದ ಪದಕ ಪಡೆದ ಕತೆಯನ್ನು ಗೋಲ್ಡ್ ಸಿನೆಮಾದಲ್ಲಿ ಮರು ಸೃಷ್ಟಿ ಮಾಡಲಾಗಿದ್ದು. ಅಕ್ಷಯ್ ಕುಮಾರ್ ಜೊತೆಗೆ ಮೌನಿರಾಯ್, ಅಮಿತ್ ಸೂದ್, ಕುನಾಲ್ ಕಪೂರ್ ಅಭಿನಯಿಸಿದ್ದಾರೆ. ಭಾರತದ ಹಾಕಿ ತಂಡದ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಅಕ್ಷಯ್‍ಕುಮಾರ್ ಗೋಲ್ಡ್‍ನಲ್ಲಿ ಅಭಿನಯಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಬ್ಲಾಕ್ ಫ್ಯಾಂಥರ್ ಸಿನೆಮಾ ಸೌದಿ ಅರೇಬಿಯದಲ್ಲಿ ತೆರೆಕಂಡಿತು. ಈಚಿತ್ರದೊಂದಿಗೆ ಸೌದಿ ಅರೇಬಿಯದಲ್ಲಿಸಿನೆಮಾ ಪ್ರದರ್ಶನಕ್ಕೆ ಚಾಲನೆ ದೊರಕಿತ್ತು.

Leave a Reply