ಸಮೃದ್ಧ ಸಾಮರಸ್ಯದ ಶ್ರೀಮಂತ ಸಂಪ್ರದಾಯಕ್ಕೆ ಮಾದರಿಯಾಗುವಂತೆ ಈ ರಾಜ್ಯ ಧಾರ್ಮಿಕ ಸೌಹಾರ್ದ ಮೆರೆಯುವ ಹಲವಾರು ಕಾರ್ಯಗಳಿಗೆ ಸಾಕ್ಷ್ಯವಹಿಸಿದೆ.
ಕೋಮು ಸಾಮರಸ್ಯದ ಮತ್ತೊಂದು ಉದಾಹರಣೆಯನ್ನು ಕರ್ನಾಟಕದಲ್ಲಿ ನಡೆದಿದೆ. ಕರ್ನಾಟಕದ ಕಲ್ಬುರ್ಗಿಯ ಮುಸ್ಲಿಂ ಸಮುದಾಯವು ರಾಮ್ ನವಮಿ ಮೆರವಣಿಗೆಯ ಸಂದರ್ಭದಲ್ಲಿ ರಾಮನ ಭಕ್ತರಿಗೆ ಹಣ್ಣಿನ ರಸ ನೀಡಿ ಸೌಹಾರ್ದ ಮೆರೆದಿದೆ. ಮುಸ್ಲಿಂ ಸಮುದಾಯದ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಮಹಾಪೂರ ಹರಿದು ಬಂದಿದೆ. ಭಾರತದಲ್ಲಿ ಹಿಂದೂ ಮುಸ್ಲಿಮರು ಸಾವಿರಾರು ವರ್ಷಗಳಿಂದ ಜೊತೆಯಾಗಿ ಬಾಳುತ್ತಿದ್ದು, ಶಿಕ್ಷಣ, ವ್ಯಾಪಾರ, ವಹಿವಾಟು ಹೀಗೆ ಸರ್ವ ರಂಗದಲ್ಲಿ ಪರಸ್ಪರ ಪಾಲುದಾರಿಕೆಯನ್ನು ಕಾಣಲು ಸಾಧ್ಯವಿದೆ.

Leave a Reply