ಹೊಸದಿಲ್ಲಿ: 7000 ಕೋಟಿ ರೂಪಾಯಿ ರೂಪಾಯಿ ವೆಚ್ಚದಲ್ಲಿ ಜಪಾನ್‍ನಿಂದ ಭಾರತ ಸರಕಾರ 18 ಬುಲೆಟ್ ಟ್ರೈನ್‍ಗಳನ್ನು ಆಮದುಗೊಳಿಸುತ್ತಿದೆ. ಹೀಗೆ ತರಿಸಿಕೊಳ್ಳುವ ರೈಲಿನೊಂದಿಗೆ ಜಪಾನ್ ಭಾರತಕ್ಕೆ ಬುಲೆಟ್ ಟ್ರೈನ್ ಕುರಿತ ತಂತ್ರಜ್ಞಾನವನ್ನು ಒದಗಿಸಲಿದೆ. ಜಪಾನ್ ಜನರಲ್ಲಿ ಬುಲೆಟ್ ರೈಲು ಸಂಚಾರ ವಿಮಾನ ಯಾನದಷ್ಟೇ ಜನಪ್ರಿಯವಾಗಿದ್ದು ಭಾರತದಲ್ಲಿಯೂ ಬುಲೆಟ್ ರೈಲು ಸಂಚಾರವನ್ನು ಹೆಚ್ಚಿನ ಜನರು ನೆಚ್ಚಿಕೊಳ್ಳಬಹುದು ಎನ್ನುವ ನಿರೀಕ್ಷೆ ವ್ಯಕ್ತವಾಗಿದೆ.

ಭಾರತ ಈಗ ಜಪಾನ್‍ನಿಂದ 18ಬುಲೆಟ್ ರೈಲುಗಳನ್ನು ಖರೀದಿಸಿ ಭಾರತಕ್ಕೆ ತರಲಿದ್ದು ಮುಂಬೈ-ಅಹ್ಮದಾಬಾದ್ ಮಾರ್ಗ ಪೂರ್ಣಗೊಂಡನೆ ಅಲ್ಲಿ ಬುಲೆಟ್ ರೈಲನ್ನು ಓಡಿಸಲಾಗುವುದು.

ಬುಲೆಟ್ ರೈಲನ್ನು ನಿರ್ಮಿಸುವ ತಂತ್ರಜ್ಞಾನ ವರ್ಗಾವಣೆಗೆ ಅಗತ್ಯವಿರುವ ವ್ಯವಸ್ಥೆಯನ್ನು ಜಪಾನ್‍ನ ಕಾವಸಾಕಿ ಮತ್ತು ಹಿಟಾಚಿ ಸಂಸ್ಥೆಗಳು ಒದಗಿಸಲಿವೆ.
2022ನೆ ಇಸವಿಯಲ್ಲಿ ಭಾರತದ ಮೊದಲ ಬುಲೆಟ್ ರೈಲು ಮುಂಬೈ-ಅಹ್ಮದಾಬಾದ್ ಮಾರ್ಗದಲ್ಲಿ ಓಡಾಡಬಹುದು ಎಂಬ ನಿರೀಕ್ಷೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. . ಜಪಾನ್‍ನ ಸಹಾಯದಲ್ಲಿ 508 ಕಿಲೊಮೀಟರ್ ದೂರದ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಗೊಳ್ಳುತ್ತಿದೆ.

ಪ್ರತಿಯೊಂದು ರೈಲಿನಲ್ಲಿ ಹತ್ತು ಬೋಗಿಗಳಿರದ್ದು, 350 ಕಿಲೊಮೀಟರ್ ವೇಗದಲ್ಲಿ ರೈಲು ಸಂಚರಿಸಲಿದೆ. ಮುಂಬೈ ಅಹ್ಮದಾಬಾದ್ ಮಾರ್ಗದಲ್ಲಿ 18,000 ಪ್ರಯಾಣಿಕರನ್ನು ನಿರೀಕ್ಷಿಸಲಾಗಿದ್ದು, ಇಕಾನಮಿ ದರ್ಜೆಯ ಟಿಕೆಟು ದರ 3,000ರೂಪಾಯಿ ಆಗಿದೆ. ವಿಮಾನz ರೀತಿಯಲ್ಲಿ ಬುಲೆಟ್ ರೈಲಿನಲ್ಲಿಯೂ ಪ್ರಥಮ ದರ್ಜೆಯ ಸೌಲಭ್ಯಗಳಿರುತ್ತವೆ.

Leave a Reply