ತೃಶೂರ್(ಕೇರಳ): ಡಿವೈಎಫ್‍ಐ ನಾಯಕಿಗೆ ಶಾಸಕರ ಹಾಸ್ಟೆಲ್‍ನಲ್ಲಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿ ಡಿವೈಎಫ್‍ಐ ಸ್ಥಳೀಯ ನಾಯಕನೊಬ್ಬನನ್ನು ಸಿಪಿಎಂ ಪಕ್ಷದಿಂದ ಒಂದು ವರ್ಷಗಳ ಕಾಲ ವಜಾಮಾಡಿದೆ. ಮಹಿಳಾ ನಾಯಕಿ ಡಿವೈಎಫ್‍ಐ ಇರಿಂಙಲಾಕ್ಕುಡ್ ಬ್ಲಾಕ್ ಜಂಟಿ ಕಾರ್ಯದರ್ಶಿ ಜೀವನ್‍ಲಾಲ್ ವಿರುದ್ಧ ಕಾಟ್ಟೂರ್ ಸರ್ಕಲ್ ಇನ್ಸೆಪೆಕ್ಟರ್‍ಗೆ ದೂರು ನೀಡಿದ್ದರು. ಜೀವನ್‍ಲಾಲ್‍ಗೆ ಗೇಟ್‍ಪಾಸ್ ನೀಡಿದ ವಿವರನ್ನು ಸಿಪಿಎಂ.

ಈವರೆಗೂ ಅಧಿಕೃತವಾಗಿ ಪ್ರಕಟಿಸಿಲ್ಲದಿದ್ದರೂ ಮಾಧ್ಯಮಗಳ ಮುಂದೆ ಸಿಪಿಎಂ ನಾಯಕರು ಜೀವನ್‍ಲಾಲ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸಿದ್ದಾರೆ. ದೂರುದಾರೆ ಡಿವೈಎಫ್‍ಐ ನಾಯಕಿಯ ಹೇಳಿಕೆಯನ್ನು ಕಾಟ್ಟೂರ್ ಪೊಲೀಸರು ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.

ಮೆಡಿಕಲ್ ಎಂಟ್ರನ್ಸ್ ಕೋಚಿಂಗ್‍ಗೆ ಸೇರಲು ತಿರುವನಂತಪುರಂಗೆ ಮಹಿಳಾ ನಾಯಕಿ ತೆರಳಿದ್ದ ವೇಳೆ ಜೊತೆಯಲ್ಲಿ ಜೀವನ್ ಲಾಲ್ ಕೂಡ ಹೋಗಿದ್ದನು. ತಿರುವನಂತಪುರಂನ ಶಾಸಕರ ಹಾಸ್ಟೆಲ್‍ನಿಂದ ಫೋನ್ ಕರೆ ಮಾಡಿ ಯುವತಿಗೆ ಕೋಚಿಂಗ್ ಸೀಟು ಕೊಡಿಸಿದ್ದಾನೆ. ಯುವತಿ ಮನೆ ಗೆ ಮರಳುವ ವೇಳೆ ಶಾಸಕರ ಹಾಸ್ಟೆಲ್‍ನಲ್ಲಿದ್ದ ಬ್ಯಾಗನ್ನು ತೆಗೆದುಕೊಳ್ಳಲು ಲೈಂಗಿಕಾಸಕ್ತಿಯಿಂದ ಜೀವನ್‍ಲಾಲ್ ತನ್ನನ್ನು ಅಪ್ಪಿಕೊಂಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದರು.. ತಾನು ವಿರೋಧಿಸಿದಾಗ ಜೀವನ್ ಲಾಲ್ ಅತ್ತನು ಮತ್ತು ಕ್ಷಮೆಯಾಚಿಸಿದ್ದಾನೆ ಎಂದು ಯುವತಿ ಹೇಳಿದ್ದಾಳೆ…

ಮನೆಗೆ ಬಂದು ತಾಯಿಗೆ ಯುವತಿ ನಡೆದ ಘಟನೆ ಹೇಳಿದ್ದಾರೆ. ಅದು ಸಿಪಿಎಂ ನಾಯಕರ ಗಮನಕ್ಕೂ ತರಲಾಗಿತ್ತು. ನಂತರ ಡಿವೈಎಫ್‍ಐ ಕಾಟ್ಟೂರ್ ವಲಯ ಕಾರ್ಯದರ್ಶಿ ಮನೆಗೆ ಕರೆಮಾಡಿ ಈ ಕುರಿತು ಬ್ಲಾಕ್ ಕಾರ್ಯದರ್ಶಿ, ಏರಿಯ ಕಾರ್ಯದರ್ಶಿಗೆ ತಿಳಿಸಲಾಗಿದ್ದು, ಜೀವನ್ ಲಾಲ್ ವಿರುದ್ಧ ಪಾರ್ಟಿ ಕ್ರಮ ಜರಗಿಸಲಿದೆ ಹೇಳಿದ್ದರು. ಪೊಲೀಸರಿಗೆ ದೂರು ನೀಡಬೇಡಿ ಎಂದಿದ್ದರು. ಆದರೆ ಜೀವನ್‍ಲಾಲ್ ವಿರುದ್ಧ ಪಾರ್ಟಿ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಸರ್ಕಲ್ ಇನ್ಸ್‍ಪೆಕ್ಟರ್‍ಗೆ ದೂರು ನೀಡಬೇಕಾಯಿತು ಎಂದು ಯುವತಿ ಹೇಳಿದರು..

Leave a Reply