ಕುವೈಟ್‍ ಸಿಟಿ: ಕುವೈಟ್‍ ಸರಕಾರ ಬೇರೆ ಬೇರೆ ಕಾರಣಗಳಿಗಾಗಿ ವಿದೇಶಿ ಉದ್ಯೋಗಿಗಳನ್ನು ದೇಶದಿಂದ ಹೊರಹಾಕಿದ್ದು ಈ ವರ್ಷ ಅರ್ಥಾತ್ 2018 ರಲ್ಲಿ 13,000 ವಿದೇಶಿಯರಿಗೆ ಅದು ಸೋಡಾ ಚೀಟಿ ನೀಡಿದೆ. ಹೀಗೆ ಗಡಿಪಾರುಗೊಂಡವರು ವಾಸ್ತವ್ಯ ನಿಯಮ ಉಲ್ಲಂಘನೆ, ಉದ್ಯೋಗ ನಿಯಮ ಉಲ್ಲಂಘನೆ, ಅಪರಾಧ, ಗಂಭೀರ ಸಾರಿಗೆ ನಿಯಮ ಉಲ್ಲಂಘನೆ ಇತ್ಯಾದಿ ಅಪರಾಧ ಎಸಗಿದವರು ಆಗಿದ್ದು, ಇನ್ನು ರೋಗಗಳ ಕಾರಣದಿಂದಲೂ ಕುವೈಟ್ ತೊರೆದು ಸ್ವದೇಶಕ್ಕೆ ಮರಳಿದವರಿದ್ದಾರೆ. ಏಡ್ಸ್, ಸಹಿತ ಸಾಂಕ್ರಾಮಿಕ ರೋಗಗಳ ಕಾರಣದಿಂದ ಗಡಿಪಾರು ಮಾಡಲಾಯಿತು ಎಂದು ವರದಿಯಾಗಿದೆ.

ಗಡೀಪಾರುಗೊಂಡಿರುವವರಲ್ಲಿ ಅತಿಹೆಚ್ಚು ಭಾರತೀಯರಿದ್ದಾರೆ. ಫಿಲಿಪ್ಪೀನಿಗಳು, ಭಾರತೀಯರು, ಈಜಿಪ್ಟಿಯನ್ನರು, ಶ್ರೀಲಂಕನ್ನರು, ಬಾಂಗ್ಲಾದೇಶಿಗಳು ಗಡೀಪಾರುಗೊಂಡಿದ್ದು, ಇವರರಲ್ಲಿ ಹೆಚ್ಚಿನ ಶಿಕ್ಷಣ ಸಂಪನ್ನರೂ ಇದ್ದಾರೆ.

ಮದ್ಯ ಮಾದಕವಸ್ತು ಪ್ರಕರಣಗಳ ಆರೋಪಿಗಳು. ವಾಸ್ತವ್ಯ ನಿಯಮ ಉಲ್ಲಂಘಿಸಿದವರು ಮತ್ತು ಅಪರಾಧಿಗಳ ಪತ್ತೆಹಚ್ಚು ದೇಶಾದ್ಯಂತ ನಡೆದಿದ್ದ ದಾಳಿಗಳಲ್ಲಿ ಸಿಕ್ಕಿಬಿದ್ದವರನ್ನೆಲ್ಲ ಗಡೀಪಾರುಗೊಳಿಸಲಾಗಿದೆ.

ಕಳೆದ ವರ್ಷದಷ್ಟು ಈ ವರ್ಷ ಜನರು ಗಡೀಪಾರು ಶಿಕ್ಷೆಗೊಳಗಾಗಿಲ್ಲ ಎಂದು ಅಧಿಕಾರಿಗಳು ಕುವೈಟ್ ಅಧಿಕಾರಿ ತಿಳಿಸಿದರು. ವಾಸ್ತವ್ಯ, ಉದ್ಯೋಗ ನಿಯಮ ಉಲ್ಲಂಘಿಸಿದವರಲ್ಲಿ ಅತ್ಯಧಿಕ ಮಂದಿ ಸಾರ್ವತ್ರಿಕ ಕ್ಷಮಾದಾನದ ವೇಳೆ ಊರಿಗೆ ಹೋಗಿದ್ದು ಕಾರಣವೆಂದು ಗುರುತಿಸಲಾಗಿದೆ.

ಗತವರ್ಷಗಳಿಗೆ ಹೋಲಿಸಿದರೆ ಈಗ ಗಡೀಪಾರು ಪ್ರಕ್ರಿಯೆ ತ್ವರಿತವಾಗಿ ನಡೆಯುತ್ತದೆ. ಗಡೀಪಾರಿಗೆ ನಿರ್ಧರಿಸಿದವರನ್ನು ಒಂದು ವಾರಗಳಿಗಿಂತ ಹೆಚ್ಚು ಕಾಲ ಕೇಂದ್ರಗಳಲ್ಲಿ ಇರಿಸಿಕೊಳ್ಳುವುದಿಲ್ಲ. ಕೆಲವು ಆರ್ಥಿಕ,ಕ್ರಿಮಿನಲ್ ಪ್ರಕರಣದ ಆರೋಪಿಗಳ ವಿರುದ್ಧ ಕೋರ್ಟಿನಲ್ಲಿ ಪ್ರಕರಣವಿದ್ದರೆ ಮಾತ್ರ ಗಡೀಪಾರು ಪ್ರಕ್ರಿಯೆ ಸ್ವಲ್ಪ ವಿಳಂಬವಾಗುತ್ತದೆ.

Leave a Reply