ಬರ್‍ಮಾರ್: ಇಬ್ಬರು ಮಹಿಳೆಯರ ಮೃತದೇಹವನ್ನು ವೈದ್ಯರು ರಸ್ತೆ ಮಧ್ಯೆ ಪೋಸ್ಟ್‍ಮಾರ್ಟ ಮಾಡಿದ ಘಟನೆ ರಾಜಸ್ತಾನದ ಬರ್ಮಾರಿನಲ್ಲಿ ನಡೆದಿದೆ. ವಿದ್ಯುಶಾಕಿನಿಂದ ಇಬ್ಬರು ಮಹಿಳೆಯರು ಮೃತರಾಗಿದ್ದರು. ವೈದ್ಯರು ತಮ್ಮ ಕೃತ್ಯಕ್ಕೆ ಸಮರ್ಥನೆ ನೀಡಿದ್ದು ಮಾನವೀಯ ದೃಷ್ಟಿಯಲ್ಲಿ ಹೀಗೆ ಮಾಡಿದೆವು ಎಂದಿದ್ದಾರೆ. ಪೋಸ್ಟ್ ಮಾರ್ಟಂ ಮಾಡಿದ ಸ್ಥಳದ ಹತ್ತಿರ ಶವಾಗಾರ ಇರಲಿಲ್ಲ. ಶವಾಗಾರ ಇರುವಲ್ಲಿಗೆ ಹೋಗಬೇಕಿದ್ದರೆ 100 ಕಿಲೊಮೀಟರ್ ಹೋಗಬೇಕು. ಆದ್ದರಿಂ ಮಾನವೀಯ ನೆಲೆಯಲ್ಲಿ ಪೋಸ್ಟ್‍ಮಾರ್ಟಂನ್ನು ರಸ್ತೆಯಲ್ಲಿ ಮಾಡಿ ಮುಗಿಸಿದೆವು ಎಂದು ಅಧಿಕಾರಿಗಳು ಸಬೂಬು ನೀಡಿದ್ದಾರೆ.

ಬರ್ಮಾರಿನ ಶಾರದಾರಸ್ತೆಯಲ್ಲಿ ವಾಸಿಸುತ್ತಿದ್ದ ರಾಜಾದೇವಿ, ಸೊಸೆ ಮಾಯಾಕನ್ವಾರ್ ಟೆರೆಸಿನ ಮೇಲಿದ್ದ ವಿದ್ಯುತ್ ತಂತಿ ತಾಗಿ ಮೃತರಾಗಿದ್ದರು. ಟೆರಿಸಿನಲ್ಲಿ ಬಟ್ಟೆ ಒಣಹಾಕಲು ಹೋಗಿದ್ದಾಗಮಾಯಾರಿಗೆ ವಿದ್ಯುತ್ ಶಾಕ್ ತಗಲಿತ್ತು. ಮಾಯಾರ ಬೊಬ್ಬೆ ಕೇಳಿ ಓಡಿ ಬಂದು ರಕ್ಷಿಸಲು ಯತ್ನಿಸಿದ ರಾಜಾದೇವಿ ಮತ್ತು ಅವರ ಪತಿ ಪದಂ ಸಿಂಗ್‍ರಿಗೆ ವಿದ್ಯುತ್ ಶಾಕ್ ಆಗಿದೆ.

ಮೂವರನ್ನು ಜೋಧಪುರ ರೈಲ್ವೆ ನಿಲ್ದಾಣದ ಗಾದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾದರೂ ಮಾಯಾ ಮತ್ತು ರಾಜಾದೇವಿ ಮೃತಪಟ್ಟಿದ್ದಾರೆ. ಪದಂಸಿಂಗ್‍ರನ್ನು ಉನ್ನತ ಚಿಕಿತ್ಸೆಗಾಗಿ ಬರ್ಮಾರ್‍ನ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮಹಿಳೆಯರ ಸಾವು ಸಂಭವಿಸಿದ ಬಳಿಕ ಇಬ್ಬರ ಮೃತದೇಹಗಳನ್ನು ವೈದ್ಯರು ನಡು ರಸ್ತೆಯಲ್ಲಿ ಪೋಸ್ಟ್ ಮಾರ್ಟಂ ನಿರ್ವಹಿಸಿದರು.

ಆರೋಗ್ಯ ಕೇಂದ್ರದ ವೈದ್ಯರು ಇದೇರೀತಿ ರಸ್ತೆಯಲ್ಲಿ ಬೇರೆ ಮೃತದೇಹಗಳ ಪೋಸ್ಟ್‍ಮಾರ್ಟಂ ಕಾರ್ಯ ಮಾಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಕ್ರಮ ಜರಗಿಸಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಘಟನೆಯಲ್ಲಿ ರಾಜಸ್ಥಾನ ಆರೋಗ್ಯ ಸಚಿವಾಲಯ ಆಸ್ಪತ್ರೆಯ ಅಧಿಕಾರಿಗಳಿಂದ ವಿವರಣೆ ಕೇಳಿದೆ.

Leave a Reply