ಅಸ್ಸಾಂ:  ಅಲ್ಯೂಮಿನಿಯಂ ಮಡಕೆಯಲ್ಲಿ ಮಕ್ಕಳು ಶಾಲೆಗೆ ಹೋಗುವ ವಿಡಿಯೋ ವೈರಲ್ ಆಗಿದ್ದು, ಎಎನ್ಐ ಸುದ್ದಿ ಸಂಸ್ಥೆ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.

ಅಸ್ಸಾಂ ರಾಜ್ಯದ ಬಿಶ್ವನಾಥ್ ಜಿಲ್ಲೆಯ ಸೂಟಿಯಾ ಗ್ರಾಮದ ಆ ಸಣ್ಣ ಹಳ್ಳಿಯ ಶಾಲಾ ಮಕ್ಕಳು ತಾವು ಶಾಲೆಗೆ ಹೋಗುವಾಗ ಜೊತೆಗೆ ಅಲ್ಯೂಮಿನಿಯಂ ತಪ್ಪಲೆ ಅಥವಾ ಮಡಕೆ ಅಥವಾ ಪಾತ್ರೆಯನ್ನು ತಮ್ಮ ಜೊತೆ ತರುತ್ತಾರೆ. ನಂತರ ಅದನ್ನು ದೋಣಿಯಂತೆ ಬಳಸಿ ನದಿ ದಾಟುತ್ತಾರೆ. ಆ ನದಿ ದಾಟಲು ಯಾವುದೇ ಸೇತುವೆ ಇಲ್ಲದ ಕಾರಣ ಮಕ್ಕಳು ಹೀಗೆ ನದಿ ದಾಟುತ್ತಾರೆ.

ಈ ಬಗ್ಗೆ ಹಲವು ಬಾರಿ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ನಮ್ಮ ದೇಶದ ನಾನಾ ಹಳ್ಳಿಗಳಲ್ಲಿ ಬಡ ಮಕ್ಕಳು ಹೀಗೆ ನದಿ ನೀರಿನ ಅಪಾಯದ ದಾರಿಯಾಗಿ ಶಾಲೆಗೆ ಹೋಗುವ ದುರವಸ್ಥೆ ಇದೆ. ಮಳೆಗಾಲದಲ್ಲಿ ಮಕ್ಕಳಿಗೆ ಶಾಲೆ ತಲುಪಲು ಇನ್ನೂ ಕಷ್ಟ ಆಗುತ್ತದೆ. ಒಂದೆಡೆ ಕಾರು ಶಾಲಾ ವಾಹನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಇನ್ನೊಂದೆಡೆ ಜೀವದ ಹಂಗು ತೊರೆದು ಶಾಲೆಗೆ ಹೋಗುವ ಮಕ್ಕಳು….

Leave a Reply