ಚಿಕ್ಕಬಳ್ಳಾಪುರ: ಗಣೇಶ ಹಬ್ದ ಸಮಯದಲ್ಲಿ ಜನರಿಂದ ಬಲವಂತವಾಗಿ ಚಂದಾ ವಸೂಲಿ ಮಾಡಿದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

“ಪಟಾಕಿ ಸಿಡಿಸಿ, ಡಿಜೆ ಸೌಂಡ್ ಸಿಸ್ಟಮ್ ಗಳನ್ನ ಅಳವಡಿಸಿ ಪರಿಸರ ಮಾಲಿನ್ಯ ಮಾಡುವಂತೆ ಯಾವ ಶಾಸ್ತ್ರ ಸಂಪ್ರದಾಯದಲ್ಲೂ ಹೇಳಿಲ್ಲ.
ಒಂದು ವೇಳೆ ಜನರು ತಾವೇ ಇಷ್ಟಪಟ್ಟು ಚಂದಾ ಕೊಡಲು ಕೊಟ್ಟರೆ ಅಭ್ಯಂತರ ಇಲ್ಲ. ತಮಗೆ ವಿಶ್ವಾಸವಿರುವ ಸಂಘ ಸಂಸ್ಥೆಗಳಿಗೆ ಮಾತ್ರ ಅವರು ಹಣವನ್ನು ನೀಡಬಹುದು. ಗಣೇಶ ವಿಗ್ರಹ ಪ್ರತಿಷ್ಠಾಪಿಸುವ ಸಂಘ ಅಥವಾ ವ್ಯಕ್ತಿ ಜಿಲ್ಲಾಡಳಿತದ ನಿಯಮಗಳನ್ನು ಪಾಲಿಸಬೇಕಿದೆ. ಇದೇ ವೇಳೆ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಜಿಲ್ಲಾಧಿಕಾರಿಗಳು ಜನರಲ್ಲಿ ಮನವಿ ಮಾಡಿಕೊಂಡರು.

Leave a Reply