ಮನಾಮ: ಬಹ್ರೈನ್‍ನಲ್ಲಿ ಮೌಲ್ಯವರ್ಧಿತ ತೆರಿಗೆಯನ್ನುಮುಂದಿನ ವರ್ಷದಿಂದ ಜಾರಿಗೊಳಿಸಲಾಗುವುದು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ವ್ಯಾಟ್ ಜಾರಿಗೆ ತರುತ್ತಿರುವುದು ಏಕೀಕೃತ ಗಲ್ಫ್ ಒಪ್ಪಂದವನ್ನು ಅಂಗೀಕರಿಸಿದ ಕಾರಣದಿಂದ ಬಹ್ರೈನ್ ಈ ಹೆಜ್ಜೆ ಇಡುತ್ತಿದೆ.

ಮೌಲ್ಯವರ್ಧಿತ ತೆರಿಗೆ ಜಾರಿಗೊಳಿಸಲು ಜಿಸಿಸಿ ದೇಶಗಳು ಏಕೀಕೃತ ಒಪ್ಪಂದದಲ್ಲಿ ಬಹ್ರೈನ್ ವಿತ್ತಸ ಚಿವ ಶೇಖ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಖಲೀಫ ಸಹಿ ಹಾಕಿದದರು. ವ್ಯಾಟ್ ಜಾರಿಗೆ ಅಗತ್ಯವಾದ ಸಾಂವಿಧಾನಿಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳು ಪೂರ್ತಿಗೊಂಡಿದ್ದು ಮುಂದಿನ ವರ್ಷದಿಂದ ವ್ಯಾಟ್ ಜಾರಿಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.

ಸಾಮಾನುಗಳು ಮತ್ತು ಸೇವೆಗಳಿಗೆ ಐದು ಶೇಕಡ ತೆರಿಗೆಯಂತೆ ಮೌಲ್ಯವರ್ಧಿತ ತೆರಿಗೆ ಜಾರಿಗೆ ಬರಲಿದೆ ಎಂದು ಈ ಹಿಂದೆ ವಿತ್ತ ಸಚಿವರು ತಿಳಿಸಿದ್ದರು. ಆದರೆ ಮೂಲಭೂತ ಆವಶ್ಯಕತೆಯಾದ ಆಹಾರ ಉತ್ಪನ್ನಗಳಿಗೆ, ಮದ್ದುಗಳಿಗೆ ಮತ್ತು ಇಂತಹ ಮೂಲಭೂತ ಅಗತ್ಯ ವಸುತಗಳನ್ನು ವ್ಯಾಟ್‍ನಿಂದ ಹೊರಗಿಡುವ ಸಾಧ್ಯತೆ ಇದೆ. ಈ ತೆರಿಗೆ ಕಡಿಮೆ ವರಮಾನದ ಬಹ್ರೈನ್ ಪ್ರಜೆಗಳಿಗೆ ಇದು ಬಾಧಕವಾಗುವುದಿಲ್ ಎಂದು ಆರ್ಥಿಕ ಸಚಿವಾಲಯ ತಿಳಿಸಿದೆ. ಜಿಸಿಸಿ ರಾಜ್ಯಗಳಲ್ಲಿ ಪರಸ್ಪರ ವ್ಯಾಟ್ ತೆರಿಗೆ ಕುರಿತು ಒಪ್ಪಂದವಾಗಿದ್ದು, ಇದು ಜಗತ್ತಿನಲ್ಲಿಯೇ ಅತೀಕಡಿಮೆ ತೆರಿಗೆಯಾಗಿದೆ ಎಂದು ಮಾಹಿತಿ ಸಚಿವ ಅಲಿ ಅಲ್ ರುಮೈಹಿ ತಿಳಿಸಿದ್ದಾರೆ.

Leave a Reply