ಪಂದಳಂ(ಕೇರಳ): ಕೇರಳದ ಪಂದಲಂನಲ್ಲಿ ಪ್ರಳಯ ಬಾಧಿತ ಜನರಿಗಾಗಿ ಉಚಿತ ಸೂಪರ್ ಮಾರುಕಟ್ಟೆಯನ್ನು ಜಮಾಅತೆ ಇಸ್ಲಾಮೀ ಸೇವಾ ವಿಭಾಗವಾದ ಐಆರ್‍ಡಬ್ಲ್ಯೂ ಹಿಂದ್ ತೆರೆದಿದೆ. ಉಚಿತ ಸೂಪರ್ ಮಾರುಕಟ್ಟೆಯನ್ನು ಪಂದಳಂ ಕಕ್ಕಾಡ್ ಇಸ್ಲಾಮಿಕ್ ಸೆಂಟರ್‍ನಲ್ಲಿ ತೆರೆಯಲಾಗಿದ್ದು ಸೂಪರ್ ಮಾರುಕಟ್ಟೆಯನ್ನು ಕೇರಳ ಜಮಾಅತೆ ಇಸ್ಲಾಮಿ ಕಾರ್ಯದರ್ಶಿ ಉಮರ್ ಆಲತ್ತೂರ್ ಉದ್ಘಾಟಿಸಿದರು.

ಐಆರ್‍ಡಬ್ಲ್ಯು ಕಾರ್ಯಕರ್ತರು ಊರಿಡೀ ಸುತ್ತಾಡಿ ಸಂತ್ರಸ್ತರನ್ನು ಗುರುತಿಸಿ ಕೂಪನ್‍ಗಳನ್ನು ನೀಡುತ್ತಿದ್ದಾರೆ. ಅದನ್ನು ಉಪಯೋಗಿಸಿ ಉಚಿತ ಸೂಪರ್ ಬಝಾರ್‍ನಿಂದ ಆಹಾರ ವಸ್ತು ಇತ್ಯಾದಿ ಅಗತ್ಯವಸ್ತುಗಳನ್ನು ಮನೆಗೆ ಕೊಂಡು ಹೋಗಬಹುದು. ಸೂಪರ್ ಬಝಾರ್‍ಗೆ ಬರಲು ಸಾಧ್ಯವಾಗದ ಅರ್ಹ ವ್ಯಕ್ತಿಗಳ ಮನೆಗಳಿಗೆ ಐಆರ್ ಡಬ್ಲ್ಯೂ ಕಾರ್ಯಕರ್ತರು ಅಗತ್ಯ ವಸ್ತುಗಳನ್ನು ತಲುಪಿಸಿಕೊಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಜಮಾಟತೆ ಇಸ್ಲಾಮೀ ಹಿಂದ್ ಕೇರಳ ಇದರ ಉಪಾಧ್ಯಕ್ಷ ಶೇಖ್ ಮುಹಮ್ಮದ್ ಕಾರಕುನ್ನು, ರಾಜ್ಯಸಮಿತಿ ಸದಸ್ಯ ಮಮ್ಮುಣ್ಣಿ ಹಾಜಿ ಮೊದಲಾದವರು ಉಪಸ್ಥಿತರಿದ್ದರು.

Leave a Reply