ಬೆಂಗಳೂರು: ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕನ್ನಡದ ಅಗ್ರಮಾನ್ಯ ಕವಿ,ಕಾದಂಬರಿಕಾರ,ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು.
ಇಂದು ರಾಷ್ಟ್ರಕವಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅವರ 113ನೇ ಜನ್ಮದಿನ. ಗೂಗಲ್ ಡೂಡಲ್ ಅವರ ಗೌರವಾರ್ಥವಾಗಿ ಕವಿಶೈಲದ ಪ್ರಕೃತಿಯ ಮಡಲಲ್ಲಿ ಬಂಡೆಯ ಮೇಲೆ ಕುಳಿತು ಕುವೆಂಪು ಸಾಹಿತ್ಯ ಸೃಷ್ಟಿಸುತ್ತಿರುವ ಚಿತ್ರವನ್ನು ಡೂಡಲ್‍ಗೆ ಬಳಸಿಕೊಳ್ಳಲಾಗಿದೆ.

ಮಾತ್ರವಲ್ಲ, ಕುವೆಂಪು ಚಿತ್ರದ ಹಿಂಭಾಗದಲ್ಲಿ ಗೂಗಲ್ ಎಂದು ಕನ್ನಡದಲ್ಲಿ ಬರೆಯಲಾಗಿದೆ. ಅಷ್ಟೇ ಅಲ್ಲದೆ ಕುವೆಂಪು ಅವರಿಗೆ ಇಷ್ಟವಾದ ಬಂಡೆ, ಕಾಜಾಣ ಹಕ್ಕಿಯನ್ನು ಚಿತ್ರಿಸಿದ್ದು, ಇದ್ದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕುವೆಂಪು ಕಿರು ಪರಿಚಯ

ಶ್ರೀ ಕೆ. ವಿ. ಪುಟ್ಟಪ್ಪ

ಜನನ – ಡಿಸೆಂಬರ್ ೨೯, ೧೯೦೪
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ

ಮರಣ – ನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ

ಅಂತ್ಯ ಸಂಸ್ಕಾರ ಸ್ಥಳ – ಕುಪ್ಪಳಿ, ಶಿವಮೊಗ್ಗ ಜಿಲ್ಲೆ

ಕಾವ್ಯನಾಮ – ಕುವೆಂಪು

ವೃತ್ತಿ – ಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ

ರಾಷ್ಟ್ರೀಯತೆ – ಭಾರತೀಯ

ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ – ಮೈಸೂರು ವಿಶ್ವವಿದ್ಯಾನಿಲಯ

ಕಾಲ- 20ನೆಯ ಶತಮಾನ

ಪ್ರಕಾರ ಶೈಲಿ – ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ‌.

ವಿಷಯ- ಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ

ಸಾಹಿತ್ಯ ಚಳುವಳಿ – ನವೋದಯ

ಪ್ರಮುಖ ಪ್ರಶಸ್ತಿ(ಗಳು) – ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ

ಬಾಳಸಂಗಾತಿ – ಹೇಮಾವತಿ

ಮಕ್ಕಳು – ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ,

ಪ್ರಭಾವಗಳು

ಕುಮಾರವ್ಯಾಸ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧಿ, ರವೀಂದ್ರನಾಥ ಟಾಗೋರ್ ಮಿಲ್ಟನ್, ವರ್ಡ್ಸ್ ವರ್ತ್,

ಪ್ರಭಾವಿತರು

ದೇ. ಜವರೇಗೌಡ, ಜಿ. ಎಸ್. ಶಿವರುದ್ರಪ್ಪ

ಕಿರು ಪರಿಚಯ ಕೃಪೆ : ವಿಕಿಪೀಡಿಯ

Leave a Reply