ಬೆಂಗಳೂರು : ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯಲು ಸರಕಾರಿ ಶಾಲೆಗಳು ತಯಾರಾಗುತ್ತಿದೆ. ಇದಕ್ಕಾಗಿ ಮೈಕ್ರೋ ಸಾಫ್ಟ್ ಕಂಪೆನಿ ಮತ್ತು ಬಿಬಿಎಂಪಿ ಶಾಲೆಗಳಲ್ಲಿ ವಿನೂತನ ಶಿಕ್ಷಣ ವ್ಯವಸ್ಥೆ ಜಾರಿಗೆ ತರಲಿದೆ.

ರೋಶಿನಿ ಯೋಜನೆಯಡಿ ಬಿಬಿಎಂಪಿ ಶಾಲೆಗಳ ಚಿತ್ರಣ ಬದಲಾಯಿಸಲು ಮೈಕ್ರೋಸಾಫ್ಟ್ ಕಂಪೆನಿ ಜೊತೆಗೆ ೫ ವರ್ಷಗಳ ಒಪ್ಪಂದ ಮಾಡಿಕೊಳ್ಳಲಾಗಿದೆ. ಮಾತ್ರವಲ್ಲ ಇದಕ್ಕೂ ಮೊದಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸ್ಯಾಟಲೈಟ್ ಶಿಕ್ಷಣ ಅಥವಾ ಆದುನಿಕ ಶಿಕ್ಷಣದ ಅರಿವು ಮೂಡಿಸುವ ಯೋಜನೆ ರೂಪಿಸಲಾಗಿದೆ.

ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಸರಕಾರಿ ಶಾಲೆಗಳು ಅಭಿವೃದ್ಧಿ ಹೊಂದಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಒಡಂಬಡಿಕೆ ಮಾಡಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಈ ರೋಶಿನಿ ಯೋಜನೆಗೆ 600 ಕೋಟಿ ರೂಪಾಯಿ ಮೈಕ್ರೋಸಾಫ್ಟ್ ಕಂಪೆನಿ ವ್ಯಯಿಸಲಿದ್ದು, ಕಟ್ಟಡ,ಮೂಲ ಸೌಕರ್ಯ,ಆಧುನಿಕ ಶಿಕ್ಷಣದ ಪರಿಕರಗಳನ್ನು ಒದಗಿಸುವುದು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ಮುಂತಾದ ಬದಲಾವಣೆಯನ್ನು ಮೈಕ್ರೋಸಾಫ್ಟ್ ಕಂಪೆನಿ ಮಾಡಲಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

Leave a Reply