ಹೈದರಾಬಾದ್: ವ್ಯಾಟ್ಸ್ ಆಪ್ ಚಾಟಿಂಗ್ ನಡೆಸುತ್ತರುವುದನ್ನು ಪತ್ನಿ ಆಕ್ಷೇಪಿಸಿದ್ದಕ್ಕಾಗಿ ತಿ ಮತ್ತು ಆತನ ಸ್ನೇಹಿತೆ ಆತ್ಮಹತ್ಯೆ ಮಾಡಿದ ಘಟನೆ ಹೈದರಾಬಾದಿನ ಸಿಕಂದರಾಬಾದ್ ನಲ್ಲಿ ನಡೆದಿದೆ. ಇಲೆಕ್ಟ್ರೀಷಿಯನ್ ಕೆ.ಶಿವಕುಮಾರ್ ಮತ್ತು ಆತನ ಸ್ನೇಹಿತೆ ವೆಣ್ಣಿಲ ಆತ್ಮಹತ್ಯೆಗೈದವರು ಎಂದು ಪೋಲೀಸರು ತಿಳಿಸಿದ್ದಾರೆ.

ಕಳೆದ ಆಗಸ್ಟ್ ಹದಿನೈದರಂದು ಶಿವಕುಮಾರ್ ಮದುವೆಯಾಗಿದ್ದ. ಪತ್ನಿಯೊಂದಿಗೆ ಚಿಕ್ಕಪುಟ್ಟ ವಿಚಾರಗಳಿಗೆ ಮನಸ್ತಾಪವಿದ್ದು ತರ್ಕ ವಾಗ್ವಾದಗಳು ನಡೆಯುತ್ತಿತ್ತು. ತನ್ನ ಸ್ನೇಹಿತೆಯ ಜೊತೆ ವ್ಯಾಟ್ಸ್ ಆಪ್ ಚಾಟಿಂಗ್ ಮಾಡುತ್ತಿರುವುದನ್ನು ಪತ್ನಿ ದಿನವೂ ಆಕ್ಷೇಪಿಸುತ್ತಿದ್ದಳು. ಇದರಿಂದ ನೊಂದ ಆತ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿ ಆತ್ಮಹತ್ಯೆಗೈದಿದ್ದ.

ಇದನ್ನರಿತ ವೆಣ್ಣಿಲ ಮರುದಿನ ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶ್ರಮಿಸಿದ್ದಾಳೆ. ಬಳಿಕ ಮನೆಗೆ ಬಂದ ಆಪ್ತರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಮರುದಿನವೇ ಸಾವನ್ನಪ್ಪಿದಳು.

Leave a Reply