ಅಂಗಮಾಲಿ(ಕೇರಳ): ಕೇರಳ ಸರಕಾರ ಪ್ರವಾಹ ಸಂತ್ರಸ್ತರಿಗೆ ನೀಡಿದ ನಷ್ಟ ಪರಿಹಾರದಿಂದ ಬ್ಯಾಂಕುಗಳು ಹಣ ಪೀಕಿಸುತ್ತಿವೆ ಎಂದು ವರದಿಯಾಗಿದೆ. ಮಿನಿಮಂ ಬ್ಯಾಲೆನ್ಸ್ , ಎಸ್‍ಎಂಎಸ್ ಚಾರ್ಜು ಕಡಿತ ಇತ್ಯಾದಿ ನೆಪದಲ್ಲಿ ಹಣವನ್ನು ತಡೆಹಿಡಿಯುತ್ತಿದೆ. ಗೃಹಿಣಿಯೊಬ್ಬರಿಗೆ ಸರಕಾರ ಪರಿಹಾರ ಧನವನ್ನು ಬ್ಯಾಂಕ್ ಮೂಲಕ ವಿತರಿಸಿದ್ದು 10,000 ರೂಪಾಯಿಯಲ್ಲಿ 800 ರೂಪಾಯಿ ವಸೂಲು ಮಾಡಿದೆ.

2017ರಲ್ಲಿ 100ರೂಪಾಯಿಯಲ್ಲಿ ಗೃಹಿಣಿ ಖಾತೆ ತೆರೆದಿದ್ದರು. ಐದು ತಿಂಗಳ ಬಳಿಕ ಮೆಂಟೈನ್ಸ್ 86.25ರೂಪಾಯಿ ಕಡಿತ ಗೊಳಿಸಿತು.ಒಂದೂವರೆ ವಾರದ ಬಳಿಕ ಒಂದು ರೂಪಾಯಿ ಬಡ್ಡಿ ನೀಡಿತು. ಒಂದೂವರೆ ತಿಂಗಳನಂತರ ಬ್ಯಾಂರ್ಖ ಮೆಂಟೆಯಿನ್ಸ್ ಹಣ ಕಿತ್ತುಕೊಂಡಾಗ ಗೃಹಿಣಿಯ ಖಾತೆ ಝೀರೊ ಬ್ಯಾಲೆನ್ಸ್ ಆಗಿದೆ. ಕೇರಳ ಸರಕಾರ ಸೆಪ್ಟಂಬರ್ 5ಕ್ಕೆ 10,000ರೂಪಾಯಿ ಗೃಹಿಣಿಯ ಬ್ಯಾಂಕ್ ಖಾತೆಗೆಜಮೆ ಮಾಡಿತ್ತು. ಮಿನಿಮಂ ಬ್ಯಾಲೆನ್ಸ್ ಮುರಿದುಕೊಂಡು ಎಸ್‍ಎಂಎಸ್ ಇತ್ಯಾದಿ ಲೆಕ್ಕ ತೋರಿಸಿ ಗೃಹಿಣಿಯ ಖಾತೆಯಿಂದ ಬ್ಯಾಂಕ್ 729.27 ರೂಪಾಯಿ ಸರಕಾರದ ಧನಸಹಾಯ ಮೊತ್ತದಿಂದ ಈಡು ಗೊಳಿಸಿದೆ.

ಈಗ ಅವರ ಖಾತೆಯಲ್ಲಿ 9202.73 ರೂಪಾಯಿ ಇದೆ ತಕ್ಷಣ ಹಣಡ್ರಾ ಮಾಡದಿದ್ದರೆ ಬ್ಯಾಂಕ್ ಹಣ ನಿರ್ವಹಣ ವೆಚ್ಚ ಇತ್ಯಾದಿ ಬ್ಯಾಂಕ್ ವಸೂಲು ಮಾಡುತ್ತಾ ಹೋಗಲಿದೆ..
2017ರ ನಂತರ ಬ್ಯಾಂಕ್‍ನಲ್ಲಿ 2000 ರೂಪಾಯಿ ಮಿನಿಮಂ ಬ್ಯಾಲೆನ್ಸ್ ಬೇಕೆಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲದಿದ್ದರೆ ಖಾತೆಗೆ ಹಣ ಬಂದಾಗ ನಿರ್ವಹಣೆ ವೆಚ್ಚ ವಸೂಲು ಮಾಡಲಾಗುತ್ತದೆ. ಕೇರಳ ನೆರೆ ನಿರಾಶ್ರಿತರಾದ ಐದು ಲಕ್ಷ ಮಂದಿಯಿಂದ ತಲಾ 500ರೂಪಾಯಿ ಕಡಿತಗೊಳಿಸಿದರೂ ಬ್ಯಾಂಕುಗಳಿಗೆ ಐದು ಕೋಟಿ ರೂಪಾಯಿ ಲಭಿಸುತ್ತದೆ. ಎಸ್‍ಎಂಎಸ್‍ನಿಂದಲೂ ಕೋಟ್ಯಂತರ ರೂಪಾಯಿ ಸಿಗುತ್ತದೆ. ಬ್ಯಾಂಕ್ ಕೇರಳದ ಪ್ರವಾಹ ಪೀಡಿತರೊಂದಿಗೆ ಈರೀತಿ ವ್ಯವಹರಿಸುತ್ತಿರುವ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Leave a Reply