ತಿರುವನಂತಪುರಂ: ಪೆಟ್ರೋಲ್ ಡೀಸೆಲ್ ಸಹಿತ ತೈಲದರ ಹೆಚ್ಚಳದ ವಿರುದ್ಧ ಜನತಾ ಹೋರಾಟ ಎದ್ದು ಬರಬೇಕೆಂದು ಕೇರಳ ವಿತ್ತ ಸಚಿವ ಥಾಮಸ್ ಐಸಾಕ್ ಹೇಳಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್‍ಟಿಯ ವ್ಯಾಪ್ತಿಗೆ ತರಲು ಪ್ರಧಾನ ಮಂತ್ರಿ ಬಯಸುತ್ತಿಲ್ಲ ಎಂದು ಸಚಿವರು ಹೇಳಿದರು. ಕೇಂದ್ರ ತೆರಿಗೆ ಕಡಿಮೆ ಮಾಡಿದರೂ ವ್ಯಾಟ್ ತೆರಿಗೆಯಲ್ಲಿ ಬದಲಾವಣೆ ಮಾಡುತ್ತಿಲ್ಲ ಎಂದು ಥಾಮಸ್ ಐಸಾಕ್ ತಿರುವನಂತಪುರಂನಲ್ಲಿ ಹೇಳಿದರು.

ಕೇಂದ್ರ ಸರಕಾರ ಇಂಧನ ಬೆಲೆ ಹೆಚ್ಚಳದ ಜವಾಬ್ದಾರ ಆಗಿದೆ. ಕ್ರೂಡ್ ಆಯಿಲ್‍ನ ಬೆಲೆ ಕಡಿಮೆಯಾದಾಗ ಅದರ ಲಾಭವನ್ನು ಜನರಿಗೆ ಸಿಗದಿರಲು ತೆರಿಗೆ ಹೆಚ್ಚಿಸಿತು. ಆದರೆ, ಕಚ್ಚಾ ತೈಲದ ಬೆಲೆ ಹೆಚ್ಚಿದಾಗ ತೆರಿಗೆ ಕಡಿಮೆ ಮಾಡಲು ಅದು ತಯಾರಾಗಲಿಲ್ಲ. ಪೆಟ್ರೋಲ್ ಕಂಪೆನಿಯಲ್ಲಿ ದರ ಹೆಚ್ಚಿಸುತ್ತಿವೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಕರ್ನಾಟಕದ ಚುನಾವಣೆಯ ಮೊದಲು ಒಂದು ತಿಂಗಳ ಕಾಲ ತೈಲದ ದರ ಹೆಚ್ಚಳ ಆಗೇ ಇಲ್ಲ ಎಂದು ಸಚಿವರು ಗಮನ ಸೆಳೆದರು.

ಇಂಧನ ದರ ಹೆಚ್ಚಳ, ಅಡಿಗೆ ಅನಿಲದ ಬೆಲೆಹೆಚ್ಚಳ ಸಬ್ಸಿಡಿಯಿಲ್ಲದ ಸಿಲಿಂಡರ್‍ಗೆ 59 ರೂಪಾಯಿ ಹೆಚ್ಚಳ . ಸಬ್ಸಿಡಿಯುಳ್ಳ ಸಿಲಿಂಡರ್‍ಗೆ ಎರಡು ರೂಪಾಯಿ 89 ಪೈಸೆ ಹೆಚ್ಚಳ ಮತ್ತು ಪೆಟ್ರೋಲ್ ಲೀಟರಿಗೆ ಇಂದು 25ಪೈಸೆ ಮತ್ತು ಡೀಸೆಲ್‍ಗೆ 32 ಪೈಸೆ ಹೆಚ್ಚಳವಾಗಿದೆ.

Leave a Reply