ಪ್ರಧಾನಮಂತ್ರಿ ನರೆಂದ್ರ ಮೋದಿಯವರನ್ನು ಟೀಕಿಸಿದ್ದಕ್ಕಾಗಿ ದೇಶದ್ರೋಹದ ಆರೋಪದಲ್ಲಿ ಕೇಸು ದಾಖಲಿಸಿದ್ದನ್ನು ಕಾಂಗ್ರೆಸ್ ನಾಯಕಿ ಚಿತ್ರನಟಿ ರಮ್ಯಾ ಅಣಕಿಸಿದ್ದಾರೆ. ಮುಂದಿನ ಬಾರಿ ಟ್ವೀಟ್ ಮಾಡುವಾಗ ಇದಕ್ಕಿಂತಲೂ ಉತ್ತಮವಾದದ್ದನ್ನು ಮಾಡುವೆ. ದೇಶದ್ರೋಹದ ಆರೋಪವೆಂಬುದು ಹೆಚ್ಚು ದುರುಪಯೋಗ ಪಡಿಸುವಂತಹದ್ದಾಗಿದೆಯೆಂದಾಗಿದೆಯೆಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಕಳ್ಳ ಎಂದು ಬರೆದ ನರೇಂದ್ರ ಮೋದಿಯ ಚಿತ್ರವನ್ನು ಟ್ವೀಟ್ ಮಾಡಿದ್ದಕ್ಕೆ ರಮ್ಯಾ ವಿರುದ್ದ ಉತ್ತರ ಪ್ರದೇಶದಲ್ಲಿ ಕೇಸು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಮೇರಾ ಪಿ.ಎಂ. ಚೋರ್ ಹೇ” ಎಂಬ ವಿಮರ್ಶೆಗೆ ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ವಿಭಾಗದ ಹೊಣೆಗಾರಿಕೆ ನಿರ್ವಹಿಸುವ ರಮ್ಯಾ ನರೇಂದ್ರ ಮೋದಿ ಸ್ವತಹ ತನ್ನ ಮೇಣದ ಪ್ರತಿಮೆಯ ಹಣೆಯಲ್ಲಿ ಚೋರ್ ಎಂದು ಬರೆದು ಟ್ವೀಟ್ ಮಾಡಿದ್ದರು. ಮಾತ್ರವಲ್ಲ ನರೇಂದ್ರ ಮೋದಿಯವರನ್ನು ದೇಶದ ಕಾವಲುಗಾರ ಕಳ್ಳ ಎಂದು ಟೀಕಿಸುವ ವಿಡಿಯೋವನ್ನು ರಮ್ಯಾ ಶೇರ್ ಮಾಡಿದ್ದಾರೆ.

Leave a Reply