ಜಾರ್ಖಂಡ್ ನಲ್ಲಿ ತಾಯಿ ಮಗಳಿಗೆ ಮನುಷ್ಯನ ಮಲವನ್ನು ತಿನ್ನಲು ಬಲವಂತ ಪಡಿಸಿದ ಆಘಾತಕಾರಿ ಘಟನೆ ನಡೆದಿದೆ.

ಜಾರ್ಖಂಡ್ ಗ್ರಾಮವೊಂದರಲ್ಲಿ 65 ವರ್ಷ ವಯಸ್ಸಿನ ತಾಯಿ ಮತ್ತು 35 ವರ್ಷದ ಮಗಳು ಮಾಟ ಮಾಡ ಮಾನವರ ಮಲವನ್ನು ತಿನ್ನುವಂತೆ ಬಲವಂತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

ನೆರೆಯಲ್ಲಿ ಮಹಿಳೆ ಮತ್ತು ಇತರ ಆರು ಮಂದಿ ಅನಾರೋಗ್ಯಕ್ಕೀಡಾಗಿದ್ದು, ಡಾಕ್ಟರ್ ರನ್ನು ಕರೆ ತರುವ ಬದಲು ಮಾಂತ್ರಿನನ್ನು ಕರೆ ತಂದಿದ್ದಾರೆ.

ಈ ರೀತಿ ಆಗಲು ಕಾರಣವೇನೆಂದು ಮಾಂತ್ರಿಕನನ್ನು ಕೇಳಿದ ಬಳಿಕ ತಾಯಿ ಮಗಳನ್ನು ಮನೆಯಿಂದ ಹೊರಗೆಳೆದು ತಲೆ ಒತ್ತಿ ಮಲ ತಿನ್ನುವಂತೆ ಸತಾಯಿಸಿದ್ದಾರೆ.


ಈ ಘಟನೆಯು ಫೆಬ್ರವರಿ 16 ರಂದು ರಾಂಚಿಯ ಸೊನಾಹುಟ ಪೊಲೀಸ್ ಠಾಣೆಯಡಿ ದುಳಮಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

Leave a Reply