ಯುದ್ಧ ಈ ಹೆಸರಿನಲ್ಲೇ ಅದೇನೋ ಒಂದು ಭಯಾನಕತೆ ಅಡಗಿದೆ. ಹೌದು ಯುದ್ಧ ಎಂದರೆ ಭೀಕರತೆ, ಯುದ್ಧ ಒಂದು ನಡೆಯಿತು ಎಂದರೆ ಅದೆಷ್ಟೋ ತಾಯಿ ತನ್ನ ಮಕ್ಕಳನ್ನು ಕಳೆದುಕೊಳ್ಳಬೇಕಾಗುತ್ತದೆ, ಅದೆಷ್ಟೋ ಮಡದಿ ತನ್ನ ಗಂಡನನ್ನು ಕಳೆದು ವಿಧವೆಯಾಗ ಬೇಕಾಗುತ್ತದೆ. ಅದೆಷ್ಟೋ ಕುಟುಂಬ ಮನೆ ಮಠ ಕಳೆದು ನಿರ್ನಾಮವಾಗ ಬೇಕಾಗುತ್ತದೆ. ಯುದ್ಧದಲ್ಲಿ ಸೋಲು ಗೆಲುವಿನ ಲೆಕ್ಕಾಚಾರದ ಮುಂದೆ ಇಂತಹ ಭಯಾನಕ ವಿಚಾರಗಳು ತಣ್ಣಗೆ ಇತಿಹಾಸದ ಪುಟ ಸೇರಿಕೊಳ್ಳುತ್ತದೆ.

ದೇಶ ಅಥವಾ ರಾಜ್ಯವೊಂದು ರೂಪುಗೊಂಡಾಗ ಪಕ್ಕದ ದೇಶ ಅಥವಾ ರಾಜ್ಯದ ನಡುವೆ ಗಡಿ ವಿವಾದ ಉಂಟಾಗುವುದು ಸಾಮಾನ್ಯ. ಈ ವಿವಾದ ಕೆಲವೊಂದು ದೇಶಗಳು ಶಾಂತಿಯಲ್ಲಿ ಬಗೆಹರಿಸಿ ಕೊಂಡರೆ ಇನ್ನು ಕೆಲವು ದೇಶಗಳ ನಡುವೆ ಮುಗಿಯದ ಕಾಳಗಕ್ಕೆ ಕಾರಣವಾಗುತ್ತದೆ. ಕೆನಡಾ ಮತ್ತು ಡೆನ್ಮಾರ್ಕ್ ನಡುವೆ 1973 ರಲ್ಲಿ ಆರಂಭವಾದ ಇದೇ ರೀತಿಯ ಗಡಿ ವಿವಾದ ವಿಸ್ಕಿ ವಾರ್ ಅಥವಾ ಲಿಕ್ಕರ್ ವಾರ್ ಎಂದು ಹೆಸರಿನಲ್ಲಿ ಕರೆಯಲ್ಪಡುವ ಸುಮಾರು 50 ವರ್ಷಗಳವರೆಗೆ ನಡೆದ ವಿಶಿಷ್ಟ ಯುದ್ಧ ಒಂದಕ್ಕೆ ನಾಂದಿಯಾಗುತ್ತದೆ.

ಜೂನ್ 2022 ರಂದು ಹ್ಯಾನ್ಸ್ ಎನ್ನುವ ದ್ವೀಪವನ್ನು ಶಾಂತಿಯುತವಾಗಿ ವಿಂಗಡಿಸುವ ಮುಖಾಂತರ ಕೆನಡಾ ಮತ್ತು ಡ್ಯಾನಿಶ್ ಸರ್ಕಾರಗಳು 50 ವರ್ಷಗಳ ವರೆಗೆ ನಡೆದ ಒಂದು ಜೀವವನ್ನು ಬಲಿ ಪಡೆಯದ ವಿಶ್ವ ಕಂಡ ಅತ್ಯಂತ ವಿಶಿಷ್ಟ ಯುದ್ಧದ ಮುಕ್ತಾಯವಾಗಿದೆ.

ವಿಸ್ಕಿ ವಾರ್ ಯುದ್ಧದ ಹಿನ್ನೆಲೆ

ಹ್ಯಾನ್ಸ್ ದ್ವೀಪವು ಗ್ರೀನ್‌ಲ್ಯಾಂಡ್ ಮತ್ತು ಎಲ್ಲೆಸ್ಮೀರ್ ದ್ವೀಪದ ನಡುವೆ ಕೆನಡಿ ಚಾನಲ್‌ನ ಮಧ್ಯದಲ್ಲಿದೆ. 1973 ರಲ್ಲಿ ಗಡಿ ಒಪ್ಪಂದಕ್ಕೆ ಸಹಿ ಹಾಕಿದಾಗ ಕೆನಡಾ ಮತ್ತು ಡೆನ್ಮಾರ್ಕ್ ಜಲಸಂಧಿಯ ಮಧ್ಯದಲ್ಲಿ ಬರುವ ಹ್ಯಾನ್ಸ್ ದ್ವೀಪದ ಬಗ್ಗೆ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಗಡಿ ವಿವರಣೆಯಲ್ಲಿ ಹ್ಯಾನ್ಸ್ ದ್ವೀಪವನ್ನು ಬಿಟ್ಟು ಒಪ್ಪಂದಕ್ಕೆ ಸಹಿ ಹಾಕಲಾಯಿತಾದರೂ ಎರಡು ದೇಶಗಳು ದ್ವೀಪ ತನ್ನದೆಂದು ವಾದಿಸುತ್ತಾ ಇತ್ತು.

Whisky War - Wikipedia

1984 ರಲ್ಲಿ ಕೆನಡಾವು ಹ್ಯಾನ್ಸ್ ದ್ವೀಪದಲ್ಲಿ ಸೈನ್ಯವನ್ನು ಇಳಿಸಿ ದ್ವೀಪದ ಮಾಲೀಕತ್ವಕ್ಕಾಗಿ ತನ್ನ ಹಕ್ಕನ್ನು ಮಂಡಿಸಿತು. ಸೈನ್ಯವು ಕೆನಡಾಕ್ಕೆ ಮರಳುವ ಮೊದಲು ತನ್ನ ದೇಶದ ಧ್ವಜವನ್ನು ಮಾತ್ರ ಅಲ್ಲಿ ನೆಡಲಿಲ್ಲ. ಬದಲಾಗಿ ಒಂದು ಕೆನಡಾ ವಿಸ್ಕಿಯನ್ನೂ ಅಲ್ಲಿ ಇಟ್ಟರು.

ಇದಾದ ಒಂದು ವಾರದ ನಂತರ ಡೆನ್ಮಾರ್ಕ್‌ನ ಗ್ರೀನ್‌ಲ್ಯಾಂಡ್ ವ್ಯವಹಾರಗಳ ಸಚಿವರು ಹ್ಯಾನ್ಸ್ ದ್ವೀಪಕ್ಕೆ ತೆರಳಿದರು. ಅಲ್ಲಿ ಅವರು ಕೆನಡಾದ ಮತ್ತು ವಿಸ್ಕಿಯನ್ನು ಡ್ಯಾನಿಶ್ ಧ್ವಜ ಮತ್ತು ಕೋಪನ್ ಹ್ಯಾಗನ್ ನ ಅತ್ಯುತ್ತಮ ಸ್ನ್ಯಾಪ್ ನ ಬಾಟಲಿಯೊಂದಿಗೆ ಬದಲಾಯಿಸಿದರು. ಅವರು ಕೆನಡಿಯನ್ನರಿಗಿಂತ ಒಂದು ಹೆಜ್ಜೆ ಮುಂದೆ ಹೋದರು, ಹೆಮ್ಮೆಯಿಂದ “ಡ್ಯಾನಿಷ್ ದ್ವೀಪಕ್ಕೆ ಸ್ವಾಗತ” ಎಂದು ಬರೆದ ಟಿಪ್ಪಣಿಯನ್ನು ಬಿಟ್ಟರು. ಇಲ್ಲಿಂದ “ವಿಸ್ಕಿ ಯುದ್ಧ” ಪ್ರಾರಂಭವಾಯಿತು.

Whisky War - Wikipedia

ಮುಂದೆ ಹಲವು ಬಾರಿ ಧ್ವಜ ಮತ್ತು ವಿಸ್ಕಿ ಬಾಟಲಿ ಬದಲಾಯಿಸಲಾಯಿತು. 2018 ರಲ್ಲಿ ವಿವಾದವನ್ನು ಪರಿಹರಿಸಲು ಜಂಟಿ ಕಾರ್ಯನಿರತ ಗುಂಪನ್ನು ಸ್ಥಾಪಿಸಲು ದೇಶಗಳು ನಿರ್ಧರಿಸಿದವು. ಇದೇ ಕಾರಣಕ್ಕೆ ಜೂನ್ 2022 ರಂದು ಆಧುನಿಕ ಜಗತ್ತಿನ ಅತೀ ಉದ್ದದ ಮತ್ತು ಒಂದು ಜೀವವು ಬಲಿ ಪಡೆಯದ ವಿಶಿಷ್ಟ ಯುದ್ಧ ಮುಕ್ತಾಯಗೊಳ್ಳುತ್ತದೆ.

Canada, Denmark make peace in 'Whisky War' | Nunatsiaq News

ಕೆನಡಾದ ವೃತ್ತಪತ್ರಿಕೆ ದಿ ಗ್ಲೋಬ್ ಅಂಡ್ ಮೇಲ್ ಜೂನ್ 10, 2022 ರಂದು ಕೆನಡಾದ ಮತ್ತು ಡ್ಯಾನಿಶ್ ಸರ್ಕಾರಗಳು ದ್ವೀಪದ ಗಡಿ ವಿವಾದ ಕೊನೆಗೊಳಿಸಿದೆ ಎಂದು ವರದಿ ಮಾಡಿದೆ, ದ್ವೀಪವನ್ನು ಕೆನಡಾದ ಪ್ರದೇಶವಾದ ನುನಾವುಟ್ ಮತ್ತು ಡ್ಯಾನಿಶ್ ಘಟಕದ ದೇಶವಾದ ಗ್ರೀನ್‌ಲ್ಯಾಂಡ್ ನಡುವೆ ವಿಂಗಡಿಸಲಾಗಿದೆ. 2022 ರ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ನಡೆಯುತ್ತಿರುವಾಗ ಇದು ಸಂಭವಿಸಿತು. ಏಕೆಂದರೆ ಪ್ರಾದೇಶಿಕ ವಿವಾದದ ಅಂತ್ಯವು ಇತರ ದೇಶಗಳಿಗೆ (ನಿರ್ದಿಷ್ಟವಾಗಿ ರಷ್ಯಾ) ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಬಹುದು ಎಂಬ ಸಂಕೇತವನ್ನು ಪ್ರತಿನಿಧಿಸುತ್ತದೆ.

Leave a Reply