ಸೋನಿ ಈ ಹೆಸರನ್ನು ಕೇಳದವರು ತುಂಬಾ ವಿರಳ! ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಲ್ಲಿ ಹಲವು ವರ್ಷಗಳಿಂದ ತನ್ನ ಪಾರುಪತ್ಯವನ್ನು ಸ್ಥಾಪಿಸಿರುವ ಜಪಾನ್ ನ ಸೋನಿ ಸಂಸ್ಥೆಯು ಈಗ ಪ್ರತಿಷ್ಠಿತ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡ ಸಂಸ್ಥೆಯೊಂದಿಗೆ ಸೇರಿ ಸೋನಿ ಹೋಂಡಾ ಮೊಬಿಲಿಟಿ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಲಗ್ಗೆ ಇಡುವ ತಯ್ಯಾರಿ ನಡೆಸುತ್ತಿದೆ.

Here's the first look at Sony Honda's EV prototype | Automotive News

ಕ್ವಾಲ್‌ಕಾಮ್ ಇಂಕಾರ್ಪೊರೇಟೆಡ್ ನ ಡಿಜಿಟಲ್ ಚಾಸಿಸ್ ಅನ್ನು ಬಳಸಿಕೊಂಡು ಹೋಂಡಾ ಜೊತೆಗೆ ನಿರ್ಮಿಸಲಿರುವ ಹೊಸ “ಅಫೀಲಾ” ಎಲೆಕ್ಟ್ರಿಕ್ ವಾಹನಗಳ ಮೂಲಮಾದರಿಯನ್ನು ಸೋನಿ ಬುಧವಾರ ಅನಾವರಣಗೊಳಿಸಿದೆ.

Sony and Honda reveal Afeela EV prototype at CES show
ಲಾಸ್ ವೇಗಾಸ್‌ನಲ್ಲಿ ನಡೆದ CES 2023 ತಂತ್ರಜ್ಞಾನ ವ್ಯಾಪಾರ ಪ್ರದರ್ಶನದಲ್ಲಿ ಘೋಷಿಸಲಾದ ಮೂಲಮಾದರಿಯು, ಎಲೆಕ್ಟ್ರಿಕ್ ವಾಹನಗಳ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಹಕ್ಕು ಸಾಧಿಸುವ ಸೋನಿಯ ಪ್ರಯತ್ನವನ್ನು ಗಮನಿಸಬಹುದಾಗಿದೆ.

Afeela Is a New EV from Sony and Honda Coming to the U.S. in 2026
ರೌಂಡ್ ಕಾರ್ನರ್ ಮತ್ತು ನಯವಾದ ಕಪ್ಪು ಛಾವಣಿಯನ್ನು ಹೊಂದಿರುವ “ಅಫೀಲಾ” 45 ಕ್ಕೂ ಹೆಚ್ಚು ಸೆನ್ಸರ್ ಗಳನ್ನು ಬಳಸುತ್ತದೆ ಎಂದು ಸೋನಿ ಹೋಂಡಾ ಮೊಬಿಲಿಟಿಯ ಮುಖ್ಯ ಕಾರ್ಯನಿರ್ವಾಹಕ ಯಶುಹೈಡ್ ಮಿಜುನೊ ಅವರು ವ್ಯಾಪಾರ ಪ್ರದರ್ಶನದಲ್ಲಿ ತಿಳಿಸಿದ್ದಾರೆ.

Sony Honda Mobility officially unveils its Afeela EV concept at CES 2023 | Engadget

ಸೀಮಿತ ಪರಿಸ್ಥಿತಿಗಳಲ್ಲಿ ಲೆವೆಲ್ 3 ಸ್ವಯಂಚಾಲಿತ ಡ್ರೈವ್ ಅಭಿವೃದ್ಧಿಪಡಿಸಲು ಮತ್ತು ಮತ್ತು ನಗರ ಚಾಲನೆಯಂತಹ ಸಂದರ್ಭಗಳಲ್ಲಿ 2+ ಚಾಲಕ ಸಹಾಯವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ ಎಂದು SHM ಹೇಳಿಕೆ ನೀಡಿದೆ.

Sony and Honda reveal Afeela, their joint EV brand, at CES | TechCrunch

ಕಾರಿನ ಒಳಗೆ ಮನರಂಜನೆಗೆ ಹೆಚ್ಚು ಒತ್ತು ನೀಡಲಿರುವ ಸಂಸ್ಥೆಯು 2026 ರಲ್ಲಿ ಅಮೇರಿಕಾದಲ್ಲಿ ಗ್ರಾಹಕರಿಕೆ ಪೂರೈಕೆ ಮಾಡುವ ಗುರಿಯನ್ನು ಹೊಂದಿದೆ.

Leave a Reply