ನವದೆಹಲಿ: ಚರ್ಮರೋಗ ತಜ್ಞ ವೈದ್ಯರ ಕೋರಿಕೆಯಂತೆ ಚರ್ಮಕ್ಕೆ ಹಚ್ಚುವ ಸ್ಟಿರಾಯ್ಡ್‌ ಇರುವ ಕ್ರೀಮ್‌ ಅಥವಾ ಮುಲಾಮುಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿಷೇಧಿಸಿದೆ.

ನವೆಂಬರ್‌ 1ರಿಂದ ಇದು ಜಾರಿಗೆ ಬರಲಿದ್ದು, ಕೇಳುವವರಿಗೆಲ್ಲಾ ಈ ಹಿಂದೆ ಇಂತಹ ಮುಲಾಮು ಗಳನ್ನು ನೀಡುವ ಪರಿಣಾಮವಾಗಿ ರಿಂಗ್ ವರ್ಮ್ ನಂತಹ ತುರಿಕೆ ಅಥವಾ ಚರ್ಮದ ಸೋಂಕುಗಳು ದೇಶದಾದ್ಯಂತ ಹರಡಿದೆ ಎಂದು ಅಭಿಪ್ರಾಯ ಪಡಲಾಗಿದೆ.

ಚರ್ಮ ರೋಗಗಳು ಮತ್ತು ಲೈಂಗಿಕ ಸಂಪರ್ಕದ ರೋಗಗಳ ತಜ್ಞ ವೈದ್ಯರ ಸಂಘವು (ಐಎಡಿವಿಎಲ್‌) ಎರಡು ವರ್ಷಗಳ ಹಿಂದೆ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿತ್ತು. ಆದರೆ ಸರ್ಕಾರ ಈ ಬಗ್ಗೆ ಸ್ಪಂದಿಸದ ಕಾಣದಿಂದ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಐಎಡಿವಿಎಲ್‌ ಸಲ್ಲಿಸಿತ್ತು.

ಮಾತ್ರವಲ್ಲ, ಇಂತಹ 300 ಕ್ಕೂ ಹೆಚ್ಚು ಮುಲಾಮುಗಳು ಬೆಳ್ಳಗಾಗುವ ಕ್ರೀಮ್ ಹೆಸರಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಇನ್ನು ಮುಂದೆ ವೈದ್ಯರ ಸಲಹೆ ಇಲ್ಲದೆ ನೀಡಬಾರದು ಎಂದು ಅವುಗಳಲ್ಲಿ ಬರೆಯಬೇಕು ಎಂದು ಹೇಳಲಾಗಿದೆ.

Leave a Reply