ಉತ್ತರಪ್ರದೇಶ: ಪೊಲೀಸರಾದರೆ ಮೂವರು ಒಂದು ಬೈಕಿನಲ್ಲಿ ಅದು ಕೂಡ ಹೆಲ್ಮೆಟ್ ಧರಿಸದೆ ಹೋಗಬಹುದೇ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾವೇರಿದ ಚರ್ಚೆ ನಡೆಯುತ್ತಿದೆ. ಹೆಲ್ಮೆಟ್ ಧರಿಸದೆ ಮೂರು ಮಂದಿ ಒಂದು ಬೈಕಿನಲ್ಲಿ ಹೋಗುತ್ತಿರುವ ದೃಶ್ಯ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಲಕ್ನೊದಲ್ಲಿ ಬೈಕಿನಲ್ಲಿರುವ ಪೊಲೀಸರು ತ್ರಿಬಲ್ ರೈಡ್ ಹೋಗುತ್ತಿರುವ ದೃಶ್ಯ ಇದು.

ಇವರ ಬೈಕಿನ ಹಿಂದಿನಿಂದ ಬರುತ್ತಿದ್ದ ಪ್ರಯಾಣಿಕರೊಬ್ಬರು ವೀಡಿಯೊ ಚಿತ್ರೀಕರಿಸಿದ್ದರು. ವೀಡಿಯೊ ಚಿತ್ರೀಕರಿಸಿದ್ದನ್ನು ಗಮನಿಸಿ ಅಸಭ್ಯವಾಗಿ ಪೊಲೀಸರು ನಿಂದಿಸುವುದು ವೀಡಿಯೊದಲ್ಲಿದೆ. ಕಾನೂನು ರಕ್ಷಕರು ಕಾನೂನನ್ನು ಪಾಲಿಸುವುದು ಹೀಗಾ ಎಂದು ಸಮಾಜಿಕ ಮಾಧ್ಯಮಗಳಲ್ಲಿ ಪ್ರಶ್ನೆ ಎದ್ದಿವೆ. ಅವರು ಏನು ಬೇಕಾದರೂ ಮಾಡಬಹುದೇ. ಆದರೆ ಈ ಪೊಲೀಸರ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

ಸಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಒಂದು ಪೋಸ್ಟ್ ಬೈಕಿನಲ್ಲಿ ಪ್ರಯಾಣಿಸಿದ ಮೂವರು ಪೊಲೀಸರಿಗೆ ಸ್ವಲ್ಪ ಮಟ್ಟಿನ ಕಷ್ಟ ತಂದು ಕೊಡುವುದು ಗ್ಯಾರಂಟಿ ಎಂದಾಯಿತು. ಸಮಾಜಿಕ ಮಾಧ್ಯಮಗಳು ಬೇಹುಗಾರಿಕೆಗೂ ಇಳಿದದ್ದರಿಂದ ಚಿಕ್ಕ ಪುಟ್ಟ ತಪ್ಪುಗಳನ್ನು ಕೂಡ ಸಮಾಜ ಗುರುತಿಸುವಂತಾದುದು ಪ್ರಜಾಪ್ರಭುತ್ವದ ಒಳ್ಳೆಯದಕ್ಕೆ ಇರಬಹುದು.

Leave a Reply