ಸಾಲವಾಗಿ ಪಡೆದ ಹಣದಿಂದ ಲಾಟರಿ ಖರೀದಿಸಿ ಒಂದೂವರೆ ಕೋಟಿ ಗಳಿಸಿದ ಘಟನೆ ಪಂಜಾಬಿನ ಸಾಂಗೂರ್ ನ ಮಾಂದ್ವಿ ಗ್ರಾಮದಲ್ಲಿ ನಡೆದಿದೆ.

ಇಟ್ಟಿಗೆಯ ಗಾರೆ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಎಂಬಾತ ಬಹಳ ಕಷ್ಟಪಟ್ಟು ದುಡಿದು 200 ದಿನಗೂಲಿ ಪಡೆಯುತ್ತಿದ್ದ. ರಾಜ್ಯ ಸರಕಾರದ ರಾಖಿ ನಂಬರ್ ಲಾಟರಿಯ ಟಿಕೇಟ್ ಖರೀದಿಸಬೇಕೆಂಬ ಹಂಬಲವಿದ್ದರೂ ಹಣವಿರಲಿಲ್ಲ. ಕೊನೆಗೆ ಸಾಲ ಪಡೆದು ಲಾಟರಿ ಖರೀದಿಸಿದ. ಅದೃಷ್ಟ ಖುಲಾಯಿಸಿತು. ಬಹುಮಾನವಾಗಿ ಒಂದೂವರೆ ಕೋಟಿ ಮನೋಜ್ ಕುಮಾರ್ ಗೆ ಒಲಿದಿತ್ತು.

ಲಾಟರಿ ಹೊಡೆದ ವಿಷಯ ಅರಿತ ಕೂಡಲೇ ಕುಟುಂಬದ ತೀರ್ಮಾನದಂತೆ ಕಲಿಕೆಯನ್ನು ಮೊಟಕುಗೊಳಿಸಲು ಬಯಸಿದ ಹಿರಿಯ ಮಗಳೊಂದಿಗೆ ಕಲಿಕೆ ಮುಂದುವರಿಸಲು ಹೇಳಿದ. ಬಾರತೀಯ ಪೋಲೀಸ್ ಸರ್ವೀಸ್ ಸೇರಲು ಬಯಸಿದ ಆಕೆಗೆ ಧೈರ್ಯದಿಂದ ಮುಂದುವರಿಯಲು ಸೂಚಿಸಿದ. ದಾದಿಯಾಗಲು ಬಯಸಿದ್ದ ಎರಡನೇಯ ಮಗಳೊಂದಿಗೆ ವೈದ್ಯೆಯಾಗಲು ಶ್ರಮಿಸಲು ಹೇಳಿದನು. ಮನೋಜ್ ಗೆ ನಾಲ್ಕು ಮಕ್ಕಳಿದ್ದಾರೆ. ಉತ್ತಮವಾದ ಕೃಷಿ ನಡೆಸಲು ಸ್ಥಳದ ಹುಡುಕಾಟದಲ್ಲಿದ್ದಾನೆ.

ಒಂದು ತಿಂಗಳ ಬಳಿಕ ಹಣ ದೊರೆಯುವುದು. ಮೊದಲು ಮನೆ ಕಟ್ಟಿ ನಂತರ ಒಂದು ವ್ಯವಹಾರ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ತನ್ನ ಮನೆಯ ಮುಂದೆ ಆನೇಕ ಬ್ಯಾಂಕಿನವರು ನಿಂತಿದ್ದಾರೆಂದೂ ಹೇಳಿದರು. 2013 ರಲ್ಲಿ ಪಂಜಾಬ್ನ ಫತೇಹಾಬಾದ್ ಜಿಲ್ಲೆಯ ನಿವಾಸಿ ಆಜಾದ್ ಸಿಂಗ್ ಕೂಡ 1 ಕೋಟಿ ರೂ. ಗಳಿಸಿದ್ದರು.

Leave a Reply