ಉಡುಪಿಯ ಕಟಪಾಡಿಯ ರವಿ ಎಂಬವರು ಅಷ್ಟಮಿ ಹಬ್ಬದ ಸಂದರ್ಭದಲ್ಲಿ ವೇಷ ಧರಿಸಿ ಪ್ರದರ್ಶನ ನಡೆಸಿ ಅದರಲ್ಲಿ ಬರುವ ಹಣವನ್ನು ಮಾರಕ ರೋಗಗಳಿಂದ ಬಳಲುತ್ತಿರುವ ಬಡ ಕುಟುಂಬದ ಮಕ್ಕಳ ಚಿಕಿತ್ಸೆಗೆ ಪ್ರತಿ ವರ್ಷ ನೀಡುತ್ತ ಬಂದಿದ್ದಾರೆ.

ಸುಮಾರು 5 ವರ್ಷಗಳಿಂದ ಈ ರೀತಿ ಸೇವೆಯನ್ನು ಮಾಡುತ್ತ ಬಂದಿದ್ದಾರೆ. ಈ ವರ್ಷವೂ ವೇಷ ಧರಿಸಿ ಬಂದ ಸುಮಾರು 5,30,000 (5 ಲಕ್ಷದ 30 ಸಾವಿರ) ರೂಪಾಯಿ ಹಣವನ್ನು 4 ಬಡ ಮಕ್ಕಳ ಚಿಕಿತ್ಸೆಗೆ ನೀಡಿರುತ್ತಾರೆ. ಯಾವುದೇ ಜಾತಿ ಧರ್ಮ ಭೇಧವಿಲ್ಲದೆ ಎಲ್ಲಾ ವರ್ಗದವರಿಗೂ ಇವರು ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ಇಂತಹ ಸಮಾಜ ಸೇವಕರನ್ನು ಗುರುತಿಸಿ ಅವರಿಗೆ ಬೇಕಾದ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕಾಗಿದೆ.ಇವರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಾಧ್ಯಮಗಳು ಕೂಡ ಪ್ರಶಂಸಿಸಿದೆ.

ರವಿ ಕಟಪಾಡಿ ವೇಷ ಧರಿಸಲು ಸಮಾರು 22 ಘಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಅದು ಅಲ್ಲದೆ 3 ದಿನಗಳ ಕಾಲ ನಿದ್ರೆ ಇಲ್ಲದೆ, ಆಹಾರ ವಿಲ್ಲದೆ ನೀರು ಕುಡಿದು ಪ್ರದರ್ಶನ ಮಾಡುತ್ತಾರೆ. ರವಿ ಕಟಪಾಡಿ ನಿಮ್ಮ ಈ ಮಾನವೀಯ ಸೇವೆಗೆ ಬಿಗ್ ಸೆಲ್ಯೂಟ್

ಈ ಹಿಂದೆ ವೇಷ ಧರಿಸಿ 14 ಲಕ್ಷ ರೂ. ಸಂಗ್ರಹಿಸಿ 16 ಬಡ ಮಕ್ಕಳ ಶಸ್ತ್ರಚಿಕಿತ್ಸೆಗೆ ನೆರವಾದ ದಿನಗೂಲಿ ಕಾರ್ಮಿಕ ರವಿ

ಪ್ರತಿ ವರ್ಷ ಶ್ರೀ ಕೃಷ್ಣ ಜನ್ಮಾಷ್ಠಮಿಯ ಆಚರಣೆಯ ಸಮಯದಲ್ಲಿ ಅವರು ದೇಹಕ್ಕೆ ಬಣ್ಣ ಹಚ್ಚುತ್ತಾರೆ. ದೇಹವನ್ನು ವರ್ಣಿಸುವ ಮೂಲಕ ಮತ್ತು ವಿವಿಧ ‘ವೇಷ’ವನ್ನು ಧರಿಸಿ ಮಕ್ಕಳ ಕಲ್ಯಾಣಕ್ಕಾಗಿ ಪರಿಶ್ರಮ ಪಡುತ್ತಾರೆ. ಹುಲಿವೇಷ ದಸರಾ ಅಥವಾ ಜನ್ಮಾಷ್ಟಮಿಯ ವೇಳೆಯಲ್ಲಿ ಸಾವಿರಾರು ಮಂದಿ ವೇಷ ಹಾಕುತ್ತಾರೆ. ಆದರೆ ರವಿ ಸಾಮಾನ್ಯ ವೇಷ ಧರಿಸುವವರ ಕೂಟದಲ್ಲಿ ಇಲ್ಲ.

ವೃತ್ತಿಯಲ್ಲಿ ಮೇಸ್ತ್ರಿ ಆಗಿರುವ ರವಿ, ಈ ರೋಮಾಂಚಕ ವೇಷ ಧರಿಸಿ ಈ ಸೇವೆ ಮಾಡುವ ಹಿಂದೆ ಒಂದು ಕಥೆಯಿದೆ.

ವೈದ್ಯರ ನಿರ್ಲಕ್ಷ್ಯದಿಂದಾಗಿ ಆವಿತಾ ಎಂಬ ಮಗು ಜನ್ಮ ಸಮಯದಲ್ಲಿ ತನ್ನ ಬಲಗೈಯ ಕಾರ್ಯಚಟುವಟಿಕೆಗಳನ್ನು ಕಳೆದುಕೊಂಡಿರುವುದನ್ನು ಕಂಡುಕೊಂಡೆ.

“ತನ್ನ ಕೈಗಳನ್ನು ಬಳಸಲು ಸಾಧ್ಯವಾಗದೆ ಕಷ್ಟ ಪಡುವ ಮಗುವನ್ನು ಕಂಡು ಮನಸ್ಸು ತುಂಬಾ ರೋದಿಸಿತು. ಅವರ ಕೈಯಲ್ಲಿ ಶಸ್ತ್ರ ಚಿಕಿತ್ಸೆಗೆ ₹ 1.15 ಲಕ್ಷದಷ್ಟು ಖರ್ಚಿಗೆ ಹಣ ಇಲ್ಲ. ನಾನು ಏನನ್ನಾದರೂ ಮಾಡಬಹುದೆಂಬುದು ನನ್ನ ಭಾವನೆ. ವೇಷ ಹಾಕಿ ಗಳಿಸಿದ ಹಣವನ್ನು ಅವರ ಶಸ್ತ್ರಚಿಕಿತ್ಸೆಗೆ ನೀಡಿದೆ “ಎಂದು ರವಿ ಹೇಳಿದರು.

ಕಲಾವಿದನಾಗಿರುವ ತನ್ನ ಸ್ನೇಹಿತನಿಂದ ಮಕ್ಕಳಿಗೆ ಇಷ್ಟವಾಗುವ ವೇಷಗಳನ್ನು ರವಿ ಮಾಡಿಸುತ್ತಾರೆ.

ದಿ ಅಮೇಜಿಂಗ್ ಸ್ಪೈಡರ್ಮ್ಯಾನ್, ದಿ ಮಮ್ಮಿ ರಿಟರ್ನ್ಸ್ನ ಪಾತ್ರಗಳಿಗೆ, ರವಿ ಬಣ್ಣ ಹಚ್ಚಿಸಿದ್ದಾರೆ.

ಮುಂಬೈನಿಂದ ಮತ್ತು ದುಬೈಗೆ ದಾನ ಮಾಡಲು ಸಿದ್ಧರಿರುವ ಜನರೊಂದಿಗೆ ಸಂಪರ್ಕಿಸಿ 2015 ಮತ್ತು 2016 ರ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಎಂಟು ವಿವಿಧ ಮಕ್ಕಳಿಗೆ 8 ಲಕ್ಷ ಸಂಗ್ರಹಿಸಿದ್ದಾರೆ.

ವೇಷ ಧರಿಸಿ ಮನೆಮನೆಗೆ ಹೋಗುವಾಗ ಯಾವುದಾದರೂ ರೋಗ ಪೀಡಿತ ಮಗು ಕಂಡರೆ ಕೂಡಲೇ ಸ್ಪಂದಿಸಿ ನೆರವಿಗೆ ಮುಂದೆ ಬರುತ್ತಾರೆ.

ಹೀಗೆ ಬಣ್ಣ ಹಚ್ಚುವಾಗ ಅವರ ದೇಹಕ್ಕೆ ಗಾಯಗಳಾಗುತ್ತದೆ. ಆದರೆ ಆ ತಂದೆ ಇಲ್ಲದ ಆಸರೆ ಇಲ್ಲದ ಬಡ ಮಕ್ಕಳಿಗೆ ಸಹಾಯ ಮಾಡುವಾಗ ಸಿಗುವ ಆತ್ಮ ಸಂತೃಪ್ತಿಯೇ ಬೇರೆ. ವೇಷ ಧರಿಸಿ ಸರಿ ಸುಮಾರು ಐದು ಲಕ್ಷದ ವರೆಗೆ ಗಳಿಸುವ ಮೊತ್ತವನ್ನು ಅವರು ಹಲವಾರು ಮಕ್ಕಳ ರೋಗ ಶುಶ್ರೂಷೆಗೆ ವ್ಯಯಿಸುತ್ತಾರೆ.

ಮನುಷ್ಯ ಹುಟ್ಟಿನಿಂದ ಮಹಾನನಾಗುವುದಿಲ್ಲ, ಬದಲಾಗಿ ಕರ್ಮದಿಂದ ಮಹಾನನಾಗುತ್ತಾನೆ ಎನ್ನುವುದಕ್ಕೆ ರವಿ ಜೀವಂತ ಉದಾಹರಣೆ.

Leave a Reply