ಭಾರತದಾದ್ಯಂತ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಹೊಸ ದೆಹಲಿಯಲ್ಲಿ ‘ರೀಯುನೈಟ್’ ಎಂಬ ಮೊಬೈಲ್ ಅಪ್ಲಿಕೇಶನ್ ಚಾಲನೆಗೆ ಬಂದಿದೆ. ಜೂನ್ 29 ರಂದು ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿಯವರು ಈ ಅಪ್ಲಿಕೇಶನ್ ಉದ್ಘಾಟಿಸಿದರು.

ಭಾರತದ ಬಹುಸಂಖ್ಯೆ ಜನಸಂಖ್ಯೆಯು ಗ್ರಾಮೀ ಹಳ್ಳಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಆದ್ದರಿಂದ ಮಕ್ಕಳ ಕಳ್ಳತನ, ಮಕ್ಕಳ ಕಾಣೆಯಾಗುವಿಕೆ ಇಲ್ಲಿ ಬಹಳ ಹೆಚ್ಚು. Huffspot ಲೇಖನವೊಂದರ ಪ್ರಕಾರ, ಪ್ರತಿ ದಿನ ಭಾರತದಲ್ಲಿ ಸುಮಾರು 180 ಮಕ್ಕಳು ಕಾಣೆಯಾಗುತ್ತಿದ್ದಾರೆ.

ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಈ ಅಪ್ಲಿಕೇಶನ್ ತಯಾರಿಸಲಾಗಿದ್ದು, ‘ಬಚ್ಪಾನ್ ಬಚಾವೊ ಅಂದೋಲನ್’ ಎಂಬ ಸತ್ಯಾರ್ಥಿ ಅವರ ಬಹುಮುಖ್ಯ ಕಾರ್ಯಕ್ರಮ ಇದಾಗಿದೆ.

“ಕಾಣೆಯಾದ ಮಕ್ಕಳನ್ನು ಹುಡುಕುವುದೇ ಹೆತ್ತವರ ಪಾಲಿಗೆ ಕೇವಲ ದುರಂತವಾಗಬಾರದು. ಮಕ್ಕಳಿಗೆ ಅವರ ಬಾಲ್ಯ ಸಿಗಬೇಕು, ಹೆತ್ತವರೂ ಮಕ್ಕಳೂ ಮರಳಿ ಒಂದಾಗಬೇಕು. ಅವರ ಪ್ರೀತಿ ಮರಳಿ ಸಿಗಬೇಕು” ಎಂದು ಸತ್ಯಾರ್ಥಿ ಹೇಳಿದ್ದಾರೆ.

  • ಈ ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ?

ಈ ಅಪ್ಲಿಕೇಶನ್ ಬಹು-ಬಳಕೆದಾರ ವೇದಿಕೆಯಾಗಿದ್ದು, ಪೋಷಕರು ಮತ್ತು ಇತರ ಜನರು ಕಾಣೆಯಾದ ಮತ್ತು ಅಸಹಾಯಕ ಮಕ್ಕಳ ಛಾಯಾಚಿತ್ರಗಳನ್ನು ಇದರಲ್ಲಿ ಅಪ್‌ಲೋಡ್ ಮಾಡಬಹುದು. ಈ ಅಪ್ಲಿಕೇಶನ್ ಅಮೆಜಾನ್ ವೆಬ್ ತಂತ್ರಜ್ಞಾನದ ಸಹಾಯದಿಂದ ಮುಖದ ಗುರುತಿಸುವಿಕೆಗೆ ನೆರವಾಗುತ್ತದೆ. ಕಾಣೆಯಾದ ಮಕ್ಕಳ ಛಾಯಾಚಿತ್ರಗಳ ಸಂಗ್ರಹ ಮತ್ತು ವಿವರಗಳನ್ನು ಮುಂದಿಟ್ಟು ಟ್ರಾಕ್ ಮಾಡಿ ಪತ್ತೆಹಚ್ಚಲು ಈ ಆ‌್ಯಪ್ ನೆರವಾಗುತ್ತದೆ.

ಇಂದಿನ ತಾಂತ್ರಿಕ ಯುಗದಲ್ಲಿ ಚಿತ್ರಗಳನ್ನು ಅಪ್ಲೋಡ್ ಮಾಡುವುದು ಗೌಪ್ಯತೆಯ ಕೊರತೆಗೆ ಕಾರಣವಾಗಬಹುದು ಎಂದು ಇದರಲ್ಲಿ ವಿಶೇಷ ಕಾಳಜಿ ವಹಿಸಲಾಗಿದೆ. ಮಕ್ಕಳ ಛಾಯಾಚಿತ್ರಗಳನ್ನು ಫೋನ್ ಮೆಮೊರಿ ಉಳಿಸಿಕೊಳ್ಳುವುದಿಲ್ಲ. ಅಪ್ಲಿಕೇಶನ್ ಮುಚ್ಚಿದ ನಂತರ ಚಿತ್ರಗಳು ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.

ಭಾರತದಲ್ಲಿ ಪ್ರತಿವರ್ಷ ಅಪಹರಣಕ್ಕೆ ಒಳಗಾದ ಮಕ್ಕಳ ಸಂಖ್ಯೆ 1 ಲಕ್ಷದ ಮೂವತ್ತೈದು ಸಾವಿರದವರೆಗೆ ದಾಟಿದೆ. ಭಾರತದಲ್ಲಿ ಪ್ರತಿ ದಿನ 180 ಮಕ್ಕಳು ಕಾಣೆಯಾಗುತ್ತಾರೆ ಎಂದು ಮಕ್ಕಳ ಹಕ್ಕುಗಳು ಮತ್ತು ನೀವು (ಸಿಆರ್‌ವೈ)ಎಂಬ ಸಂಸ್ಥೆ ವರದಿ ಮಾಡಿತ್ತು. ಕಾಣೆಯಾದ ಇವರು ಯಾರು ಐಷರಾಮಿ ಜೀವನ ನಡೆಸುತ್ತಿಲ್ಲ. ಹೆಣ್ಣು ಮಕ್ಕಳಾದರೆ ಪ್ರಾಯಕ್ಕೆ ಕಾಲಿಡುವ ಮುನ್ನವೆ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಗಂಡು ಮಕ್ಕಳಾದರೆ ದೈಹಿಕ ಹಿಂಸೆ ನೀಡಿ ಕೈಯಲ್ಲಿ ತಟ್ಟೆ ಕೊಟ್ಟು ಭಿಕ್ಷೆ ಬೇಡಲು ಕಳುಹಿಸಿಕೊಡುತ್ತಾರೆ. ಕೆಲವೊಮ್ಮೆ ಅವರ ಕೈಕಾಲುಗಳನ್ನು ಅಂಗ ವಿಕಲಗೊಳಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಸ್ಲಮ್ ಡಾಗ್ ಮಿಲೇನಿಯರ್ ಎಂಬ ಸಿನಿಮಾ ಕೂಡ ಬಂದಿತ್ತು. ಅದರಲ್ಲೂ ಈ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು.

Leave a Reply