ಮಸ್ಕತ್ ನಲ್ಲಿ ಕಲ್ಯಾಣ್ ಜ್ಯುವೆಲ್ಲರ್ಸ್ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರು ಒಟ್ಟು ಸೇರಿದ್ದು ವಿಶೇಷವಾಗಿದೆ.

ಕಲ್ಯಾಣ್ ಜ್ಯುವೆಲ್ಲರ್ಸ್ ನ ಶೋರೂಂ ಉದ್ಘಾಟನೆ ವೇಳೆ ಕನ್ನಡದ ಖ್ಯಾತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಬಾಲಿವುಡ್ ಬಾದ್ ಶಾಹ್ ಶಾರೂಕ್ ಖಾನ್ ಪರಸ್ಪರ ಭೇಟಿಯಾಗಿದ್ದಾರೆ.

ಕರ್ನಾಟಕದಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ನ ಬ್ರ್ಯಾಂಡ್ ಅಂಬಾಸಿಡರ್ ಶಿವರಾಜ್ ಕುಮಾರ್, ನಾಗಾರ್ಜುನ, ಪ್ರಭು ಮತ್ತು ಮಲಯಾಳಂ ನಟಿ ಮಂಜು ವಾರಿಯರ್ ಹಾಗೂ ಇನ್ನಿತರ ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಾನು ಈ ಹಿಂದೆ ಮೂರು ಬಾರಿ ಶಾರೂಕ್ ಖಾನ್ ರನ್ನು ಭೇಟಿ ಮಾಡಿದ್ದೆ. ಆದರೆ ಈ ಬಾರಿ ಸ್ವಲ್ಪ ಹೆಚ್ಚು ಸಮಯ ಮಾತನಾಡಲು ಅವಕಾಶ ಸಿಕ್ಕಿತು. ಅವರು ಯಾವಾಗಲೂ ಸಿಕ್ಕಿದಾಗ ಬೆಂಗಳೂರು ನಗರದ ಮೇಲೆ ಅವರಿಗಿರುವ ಪ್ರೀತಿಯ ಬಗ್ಗೆ ಮಾತನಾಡುತ್ತಾರೆ. ನಾನು ಹಾಡಿದೆ. ನನಗೆ ಒಳ್ಳೆಯ ಧ್ವನಿಯಿದೆ ಎಂದು ಹೊಗಳಿದರು ಎಂದು ಶಿವಣ್ಣ ಶಾರೂಖ್ ಬಗ್ಗೆ ಹೇಳಿದ್ದಾರೆ.
ಕನ್ನಡದ ಎಸ್ ಆರ್ ಕೆ ಆಗಿರುವ ಶಿವಣ್ಣರಿಗೆ ಇದೊಂದು ಸಂತಸದ ವಿಷಯವಾಗಿದೆ.

Leave a Reply