ಸ್ವಿಟ್ಝರ್‍ಲೆಂಡ್‍ನ ಹೆಸರು ಕೇಳಿದರೆ ಸಾಕು ಮೈ ಪುಳಕಿತವಾಗುತ್ತದೆ. ಪ್ರಕೃತಿ ಸೌಂದರ್ಯ ಆಸ್ವಾದಿಸಲು ಈ ಸ್ಥಳ ಅತ್ಯಂತ ಸೂಕ್ತ. ಆತ್ಮಹತ್ಯೆ ಮಾಡಲು ಮನಸ್ಸು ಮಾಡುವವರಿಗೂ ಈ ಪ್ರದೇಶವೇ ಉತ್ತಮ. ಇಲ್ಲಿಗೆ ಆತ್ಮಹತ್ಯೆಗಾಗಿಯೇ ಬರುವವರ ಸಂಖ್ಯೆ ಅಧಿಕ ವಾಗುತ್ತಿದೆ ಎಂದು 2004 ರಲ್ಲಿ ವರದಿಯಾಗಿತ್ತು. . ಸಾಯಲು ಬಯಸು ವವರಿಗೆ ನೆರವಾಗಲೆಂದು ಇಲ್ಲಿ ಸಂಸ್ಥೆ ಆರು ಇದೆ. ಸಾಯುವ ಹಕ್ಕು ಸಂಸ್ಥೆ ಎಂದು ಹೆಸರು. ಈ ಹಕ್ಕುಗಳಲ್ಲಿ ರೋಗ ದಿಂದ ಬೇಸತ್ತವರು (ಉದಾ: ನರ ಸಂಬಂಧಿ ರೋಗಿಗಳು, ಪಾರ್ಕಿನ್‍ಸನ್ ರೋಗಿ, ಪಾಶ್ರ್ವವಾಯು ಪೀಡಿತರು ದೊಡ್ಡ ಪ್ರಮಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ). ಬೇರೆ ಬೇರೆ ದೇಶದಿಂದ ಬಂದ ವರು ಇಲ್ಲಿ ಆತ್ಮಹತ್ಯೆ ಮಾಡುತ್ತಿರುತ್ತಾರೆ. ಇತ್ತೀಚೆಗೆ ಮಾಡೆಲ್ ಒಬ್ಬಳು ಆತ್ಮಹತ್ಯೆ ಮಾಡಿದ್ದು ಮಾಧ್ಯಮಗಳಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿತ್ತು.

ಮನರಂಜನೆಗಾಗಿ, ಶಾಂತಿಗಾಗಿ, ಖುಷಿ ಗಾಗಿ ಪ್ರವಾಸವನ್ನು ಕೈಗೊಳ್ಳಲಾಗುತ್ತದೆ. ಆದರೆ ಸಾಯಲೆಂದು ಪ್ರವಾಸ ಮಾಡುವ ಜನರು ಈ ಲೋಕದಲ್ಲಿದ್ದಾರೆಂದರೆ ವಿಷಾದಕರ ಅನಿಸುತ್ತದೆ. ಸಾಯುವವರಿಗೆ ನೆರವಾಗುವ ಸಂಸ್ಥೆಗಳು ಬಹುಶಃ ಈ ಕಾರ್ಯವನ್ನು ‘ಪುಣ್ಯ’ ಎಂದು ತಿಳಿದು ಕೊಂಡಿದೆಯೇನೋ!

‘ಜನನ ಮತ್ತು ಮರಣ’ ದೇವ ವಿದಿತ ಆಗಿರಬೇಕೆಂದು ಒಂದು ವರ್ಗದ ಜನರ ನಂಬಿಕೆ. ಆತ್ಮಹತ್ಯೆಯನ್ನು ಮಹಾಪಾಪ ಎಂದು ಹಲವು ಧರ್ಮಗಳು ಉಪದೇಶಿಸುತ್ತದೆ. ಈ ಸಂಸ್ಥೆಗಳು ಪಾಪಕಾರ್ಯಕ್ಕೆ ನೆರವಾಗುವ ಮೂಲಕ ಮಹಾಪಾಪಿಗಳ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾ ಯಿಸಿಕೊಳ್ಳುತ್ತಿರಬಹುದು. ವಿದೇಶದ ಈ ಸಂಸ್ಥೆಗಳು ತಮ್ಮ ಪ್ರಭಾವವನ್ನು ಇನ್ನಿತರ ದೇಶಗಳಿಗೂ ವೈರಸ್‍ನಂತೇ ಹಬ್ಬಿಸುವ ಕಾಲ ದೂರ ಇಲ್ಲ. ನಮ್ಮ ದೇಶದಲ್ಲಿ ‘ಆತ್ಮಹತ್ಯೆ’ ಅಪರಾಧ ಎಂದು ಪರಿ ಗಣಿಸಿ ಅದಕ್ಕೆ ಶಿಕ್ಷೆಯೂ ಸಿಗುತ್ತಿದೆ.

Leave a Reply