ಝೊಮೊಟೊ ಮತ್ತು ಸ್ವಿಗ್ಗಿಗಳಂತಹ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಜನರು ತಮ್ಮ ಆಹಾರವನ್ನು ಆನ್ಲೈನ್ನಲ್ಲಿ ತರಿಸುತ್ತಾರೆ. ಇದರಿಂದನಗರಗಳಲ್ಲಿ ಆಹಾರ ವಿತರಣಾ ಕ್ಷೇತ್ರದಲ್ಲಿ ಜನರು ಹೆಚ್ಚು ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮಾತ್ರವಲ ಉತ್ತಮ ಸಂಪಾದನೆ ಮಾಡುತ್ತಿದ್ದಾರೆ.

ತಮ್ಮ ಮೋಟರ್ಸೈಕಲ್ಗಳಲ್ಲಿ ರಸ್ತೆಗಳನ್ನು ನ್ಯಾವಿಗೇಟ್ ಮಾಡಿ ಜನರಿಗೆ ಆಹಾರ ಕೊಡುವುದು ಅಷ್ಟು ಸುಲಭದ ಕೆಲಸ ಕೂಡ ಅಲ್ಲ. ಆದರೆ ಇತ್ತೀಚೆಗೆ ಝೊಮೊಟೊದಲ್ಲಿ ಆಹಾರ ಡೆಲಿವರಿ ಮಾಡುವ ವ್ಯಕ್ತಿಯ ವಿಡಿಯೋ ತುಂಬಾ ವೈರಲ್ ಆಗಿದೆ. ಯಾಕೆಂದರೆ ಇದುವರೆಗೆ ಅಂತಹ ಡೆಲಿವರಿ ಬಾಯ್ ನೀವು ನೋಡಿರಲಿಕ್ಕಿಲ್ಲ. ತನ್ನ ಅಂಗ ವೈಕಲ್ಯತೆಯ ಹೊರತಾಗಿಯೂ ಸ್ವಾಭಿಮಾನಿ ಬದುಕು ಸಾಗಿಸುವ ಈ ವ್ಯಕ್ತಿಗೆ ಸಾಮಾಜಿಕ ಜಾಲ ತಾಣಿಗರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ತನ್ನ ಕೈಯಿಂದ ಟ್ರೈಸಿಕಲ್ನನ್ನು ಚಲಾಯಿಸುತ್ತಾ ಆಹಾರವನ್ನು ವಿತರಿಸುವ ದೃಶ್ಯ ಎಲ್ಲರಿಗೂ ಪ್ರೇರಣೆ ನೀಡಿದೆ.
ಈ ವಿಕಲ ಚೇತನ ವ್ಯಕ್ತಿಯನ್ನು ರಾಮು ಎಂದು ಗುರುತಿಸಲಾಗಿದ್ದು, ಅವರ ಪರಿಶ್ರಮ ಮತ್ತು “ಸಕಾರಾತ್ಮಕ ಧೋರಣೆ” ಗಾಗಿ ಟ್ವಿಟರ್ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ಹನಿ ಗೋಯಲ್, ಈ ವಿಕಲ ಚೇತನ ವ್ಯಕ್ತಿ ರಾಜಸ್ಥಾನದ ಬೀವರ್ ನಗರದವರಾಗಿದ್ದಾರೆ ಎಂದು ಹೇಳಿದ್ದಾರೆ.

https://twitter.com/yaro_evan/status/1129971290217992192

Leave a Reply